ಅಯೋಧ್ಯೆ :
ರಾವಣ ಸೀತಾಮಾತೆಯನ್ನು ಅಪಹರಿಸಿಕೊಂಡು ಹೋದ ನಂತರ ಶ್ರೀರಾಮಚಂದ್ರ ಆಕೆಯನ್ನು ಹುಡುಕುತ್ತಾ ದೇಶದ ಹಲವು ಪ್ರದೇಶಗಳನ್ನು ಸುತ್ತಾಡಿದ್ದ. ಅದಕ್ಕೆ ಸಂಬಂಧಪಟ್ಟಂತೆ ಹಲವಾರು ಐಹಿತ್ಯಗಳು ಕಂಡುಬರುತ್ತವೆ.

ರಾಮ ಮಂದಿರ ಉದ್ಘಾಟನೆಗೆ ದಿನಗಳು ಹತ್ತಿರ ಬರುತ್ತಿದ್ದಂತೆ, ರಾಮನ ಭಂಟ ಹನುಮಂತನ ನಾಡಿನ ಕೊಪ್ಪಳ ಜನರಿಗೆ ಸಂತಸ ಇಮ್ಮಡಿಯಾಗುತ್ತಿದೆ. ರಾಮ ಮಂದಿರ ಉದ್ಘಾಟನೆಯ ಐತಿಹಾಸಿಕ ಕ್ಷಣಗಳನ್ನು ಕಣ್ಣುಂಬಿಕೊಳ್ಳಲು ಕಿಷ್ಕಿಂದೆ ಜನ ಕಾಯುತ್ತಿದ್ದಾರೆ.

ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ, ಹನುಮನ ಜನ್ಮಸ್ಥಳ ಅಂತ ಹೇಳುತ್ತಾರೆ. ಅಂಜನಾದ್ರಿ ಬೆಟ್ಟದಲ್ಲಿ ಹನುಂತನ ದೇವಸ್ಥಾನವಿದೆ. ಹನುಮಂತನ ದೇವಸ್ಥಾನದ ಆವರಣದಲ್ಲಿಯೇ ಹನುಮಂತನ ತಾಯಿ ಅಂಜನಾದೇವಿಯ ದೇವಸ್ಥಾನ ಇದೆ. ಅಂಜನಾದೇವಿಗೆ ಪ್ರತಿನಿತ್ಯ ಪೂಜೆ ನಡೆಯುತ್ತದೆ. ಇನ್ನು ತನ್ನ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹನುಮಂತನನ್ನು ರಾಮ ಮರೆಯದೇ, ಮರಳಿ ಅಂಜನಾದ್ರಿಗೆ ಬಂದು, ಅಂಜನಾದೇವಿಗೆ ತನ್ನ ದರ್ಶನ ನೀಡ್ತಾನೆ ಅಂತ ಹೇಳಲಾಗುತ್ತಿದೆ.

ಕಿಷ್ಕಿಂದೆಯಲ್ಲಿ ರಾಮನ ಅನೇಕ ಹೆಜ್ಜೆ ಗುರುತುಗಳು ಇವೆ. ರಾಮ ಮತ್ತು ಆಂಜನೇಯ ಭೇಟಿಯಾಗಿದ್ದು, ವಾಲಿ ಹತ್ಯೆ ಮಾಡಿದ್ದು ಸೇರಿದಂತೆ ರಾಮ ಮತ್ತು ಆಂಜನೇಯನ ಬಗ್ಗೆ ಅನೇಕ ಘಟನೆಗಳು ವಾಲ್ಮೀಕಿಯ ರಾಮಾಯಣದಲ್ಲಿ ಉಲ್ಲೇಖವಾಗಿವೆ.

ಶ್ರೀರಾಮ ಹನುಮಂತನ ಜನ್ಮಸ್ಥಳ ಅಂಜನಾದ್ರಿಗೆ ಹನುಮಂತನ ತಾಯಿ ಅಂಜನಾದೇವಿಯನ್ನು ಭೇಟಿ ಮಾಡಿ, ಆಶೀರ್ವಾದ ಜೊತೆಗೆ ಕೃತಜ್ಞತೆ ಸಲ್ಲಿಸಿದ್ದ.

ರಾಮ ಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಇದು ಕನ್ನಡಿಗರಿಗೆ ಸಂತಸವನ್ನು ಹೆಚ್ಚಿಸಿದೆ. ರಾಜ್ಯದ ಕಿಷ್ಕಿಂದೆಯಲ್ಲಿ ರಾಮನ ಅನೇಕ ಹೆಜ್ಜೆ ಗುರುತುಗಳು ಇವೆ. ಅಯೋಧ್ಯೆಯಿಂದ ಪತ್ನಿಯನ್ನು ಹುಡುಕುತ್ತಾ ಹೊರಟಿದ್ದ ಪ್ರಭು ಶ್ರೀರಾಮ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ತುಂಗಭದ್ರಾ ನದಿ ಪ್ರದೇಶದಲ್ಲಿರುವ ಕಿಷ್ಕಿಂದೆ ಭಾಗಕ್ಕೆ ಬಂದಿದ್ದ. ಅಲ್ಲಿ ಆಂಜನೇಯನನ್ನು ಭೇಟಿ ಮಾಡಿದ್ದ. ನಂತರ ಲಂಕೆ ಮೇಲೆ ದಾಳಿ ಮಾಡಿ, ರಾವಣನನ್ನು ಸೋಲಿಸಿ, ಸೀತೆಯನ್ನು ಬಿಡಿಸಿಕೊಂಡು ಬರುವಲ್ಲಿ ಹನುಮಂತ ಮತ್ತು ಕಿಷ್ಕಿಂದೆಯ ವಾನರ ಸೇನೆಯ ಕೊಡುಗೆ ದೊಡ್ಡದಿದೆ. ಹೀಗಾಗಿ ಲಂಕೆಯಿಂದ ಮರಳುವಾಗ ಪ್ರಭು ಶ್ರೀರಾಮ
ನೇರವಾಗಿ ಅಯೋಧ್ಯೆಗೆ ಹೋಗದೆ ಮರಳಿ ಮತ್ತೆ ಅಂಜನಾದ್ರಿಗೆ ಬಂದಿದ್ದ. ಅಂಜನಾದ್ರಿಯಲ್ಲಿರುವ ಹನುಮಂತನ ತಾಯಿ ಅಂಜನಾದೇವಿಯನ್ನು ಭೇಟಿ ಮಾಡಿ, ಅಂಜನಾದೇವಿಯಿಂದ ಆಶೀರ್ವಾದ ಪಡೆದು, ಆಕೆಗೆ ಕೃತಜ್ಞತೆ ಸಲ್ಲಿಸಿದ್ದ. ಹನುಮಂತ ಮತ್ತು ವಾನರ ಸೇನೆಯ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದ್ದ ಎಂದು ಅನೇಕ ಇತಿಹಾಸಕಾರರು ಹೇಳಿದ್ದಾರೆ.