ಗುಣಾ: ನಮ್ಮಲ್ಲಿ ಮದುವೆಯಾದ ಮೇಲೆ ಆಕೆಯ ಹೆಸರಿ ಜೊತೆಗೆ ಗಂಡನ ಮನೆಯವರ ಉಪನಾಮ ಸೇರಿಕೊಳ್ಳುತ್ತದೆ. ಪ್ರಿಯಾಂಕಾ ಗಾಂಧಿ ಕೇವಲ ಮತ ಸೆಳೆಯುವುದಕ್ಕೆ ತಮ್ಮ ಹೆಸರಿನ ಜೊತೆ ಗಾಂಧಿ ಹೆಸರನ್ನು ಸೇರಿಸಿ ಕೊಂಡಿದ್ದಾರೆ. ಇವರೆಲ್ಲರೂ ನಕಲಿ ಗಾಂಧಿಗಳು ಎಂದು ಮಧ್ಯ ಪ್ರದೇಶ ಸಿಎಂ ಮೋಹನ್ ಯಾದವ್ ಕೈನಾಯಕಿ ಪ್ರಿಯಾಂಕಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚಿಗಷ್ಟೇ ಪ್ರಿಯಾಂಕಾ ನನ್ನ ತಾಯಿ ದೇಶಕ್ಕಾಗಿ ಮಂಗಳ ಸೂತ್ರವನ್ನು ತ್ಯಾಗ ಮಾಡಿದ್ದರು ಎಂದಿದ್ದರು. ಇದಕ್ಕೆ ಮ.ಪ್ರ. ಸಿಎಂ ಪ್ರಿಯಾಂಕಾ ತಾಳಿ ಧರಿಸಿಲ್ಲ ಎಂದು ತಿರುಗೇಟು ನೀಡಿದ್ದಾರೆ.