ಇಂಡಿ: ಆಟವಾಡುತ್ತಾ ತೋಟದ ಕೊಳವೆಬಾವಿಗೆ ಬಿದ್ದು 22 ಗಂಟೆಗಳ ಕಾಲ ಜೀವನ್ಮರಣದ ಮಧ್ಯೆ ಹೋರಾಡಿ ಪವಾಡ ಸದೃಶದಲ್ಲಿ ಬದುಕಿ ಬಂದಿದ್ದ ಲಚ್ಯಾಣ ಗ್ರಾಮದ ಸಾತ್ವಿಕ್ ಮುಜಗೊಂಡಗೆ ಸಿದ್ದಲಿಂಗ ಎಂದು ಮರು ನಾಮಕರಣ ಮಾಡಲಾಗಿದೆ. ಶ್ರೀ ಶಂಕರಲಿಂಗ ಮಹಾಶಿವಯೋಗಿಗಳ ಮಹಾರಥೋತ್ಸವದ ಅಂಗವಾಗಿ ಹಲವಾರು ಶ್ರೀ ಸಮ್ಮುಖದಲ್ಲಿ ಸಾತ್ವಿಕನ ತೊಟ್ಟಿಲೋತ್ಸವ ನೆರವೇರಿಸಿ ಸಿದ್ದಲಿಂಗ ಎಂದು ಮರು ನಾಮಕರಣ ಮಾಡಿದರು. ಕೊಳವೆ ಬಾವಿಯಲ್ಲಿ ಬಿದ್ದು ಸಾವನ್ನೇ ಗೆದ್ದು ಬಂದ ಸಂದರ್ಭದಲ್ಲಿ ಸಾತ್ವಿಕನ ಪಾಲಕರು ಇಂದು ಸಿದ್ದಲಿಂಗೇಶ್ವರರ ದಯೆಯಿಂದನನ್ನ ಮಗ ಬದುಕಿ ಬಂದಿದ್ದಾನೆ. ಹೀಗಾಗಿ ಆತನಿಗೆ ಸಿದ್ದಲಿಂಗ ಎಂದು ಮರು ನಾಮಕರಣ ಮಾಡುತ್ತೇವೆ ಎಂದು ಹರಕೆ ಕಟ್ಟಿಕೊಂಡಿದ್ದರು. ಅದರಂತೆ ಸಿದ್ದಲಿಂಗ ಮಹಾರಾಜರ ರಥೋತ್ಸವದಂದು ತೊಟ್ಟಿಲೋತ್ಸವ ಮಾಡಿ ಸಿದ್ದಲಿಂಗ ಎಂದು ಮರು ನಾಮಕರಣ ಮಾಡಿ ತಮ್ಮ ಹರಕೆ ತೀರಿಸಿದರು.