ಬೆಳಗಾವಿ :
ಕರ್ನಾಟಕ ಸರ್ಕಾರ ಬೆಳಗಾವಿಯಲ್ಲಿ ಪ್ರತಿ ವರ್ಷ ವಿಧಾನ ಮಂಡಲದ ಚಳಿಗಾಲದ ವಿಶೇಷ ಅಧಿವೇಶನ ನಡೆಸುತ್ತಿರುವುದನ್ನು ವಿರೋಧಿಸಿ ಮಹಾಮೇಳಾವ ನಡೆಸುತ್ತಾ ಬಂದಿರುವ ಎಂಇಎಸ್ ಈ ಬಾರಿ ಮಹಾರಾಷ್ಟ್ರಕ್ಕೆ ಸೇರಿರುವ ಗಡಿಭಾಗದ ಶಿನ್ನೋಳಿಯಲ್ಲಿ ಮಹಾಮೇಳಾವ ನಡೆಸಲು ಮುಂದಾಗಿದೆ.

ಬೆಳಗಾವಿ ಮಹಾನಗರದಲ್ಲಿ
ಮಹಾಮೇಳಾವ್ ಆಯೋಜನೆಗೆ ಜಿಲ್ಲಾಡಳಿತ ಅನುಮತಿ ನೀಡದ ಕಾರಣ ಬೆಳಗಾವಿ ಗಡಿಗೆ ಹೊಂದಿಕೊಂಡಿರುವ
ಶಿನ್ನೊಳ್ಳಿಯಲ್ಲಿ ಮೇಳಾವ ನಡೆಸಲು ಮುಂದಾಗಿರುವ
ಎಂಇಎಸ್ ಕರ್ನಾಟಕ ಹಾಗೂ ಮಹಾರಾಷ್ಟ್ರ ಸರಕಾರಗಳ ವಿರುದ್ಧ ಸಿಡಿದೇಳಲು ತೀರ್ಮಾನಿಸಿದೆ.