ಬೆಳ್ವೆ:
ಬೆಳ್ವೆ ಸಮೀಪದ ಹೆಂಗವಳ್ಳಿ ಗ್ರಾಮದ ಮರೂರು
ಮಂದುಪಾಲ್ ಎಂಬಲ್ಲಿ ಮರಾಠಿ ಸಮುದಾಯ
ಬಾಂಧವರು ಹಿಂದಿನ ಕಾಲದಿಂದಲೂ ಆರಾಧಿಸಿಕೊಂಡು ಬಂದಿರುವ ಶ್ರೀ ಮಹಾಮ್ಮಾಯಿ ಕಟ್ಟೆ ಅಮ್ಮನವರ ಹತ್ರಕಟ್ಟೆ ದೇವಸ್ಥಾನವು ಶ್ರೀ ಮಹಾಮ್ಮಾಯಿ ಕಟ್ಟೆ ಅಮ್ಮನವರ ಟ್ರಸ್ಟ್,(ರಿ.),ಮಂದುಪಾಲ್ ಮರೂರು ಮೂಲಕ ಇದೀಗ ನವೀಕರಣದೊಂದಿಗೆ ಮಾ 8 ನೇ ಶುಕ್ರವಾರ ಪುನರ್ ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿದೆ.

ಶುಭ ಕಾರ್ಯಗಳ ಸಂದರ್ಭದಲ್ಲಿ
ಮತ್ತು ವಾರ್ಷಿಕ ಪೂಜೆ ನಡೆಸುತ್ತಾರೆ. ಹತ್ರಕಟ್ಟೆ
(ತುಳಸಿ ಕಟ್ಟೆ) ಧಾರ್ಮಿಕ ನೆಲೆಯಲ್ಲಿ ಬಹಳಷ್ಟು
ಪಾವಿತ್ರ್ಯತೆಯನ್ನು ಹೊಂದಿದೆ. ಮರಾಠಿ
ಸಮುದಾಯದ ಹತ್ತು ಸಮಸ್ತರು ಹೋಳಿ ಹಬ್ಬದ
ಆಚರಣೆಯಲ್ಲಿ ಇಲ್ಲಿ ಸೇರಿಕೊಂಡು ಏಕಾದಶಿಯಂದು
ಹತ್ರಕಟ್ಟೆ (ತುಳಸಿಕಟ್ಟೆ)ಯಲ್ಲಿ ಸಿಪ್ಪೆ
ತೆಂಗಿನಕಾಯಿಯನ್ನು ಇರಿಸಿ ಶ್ರದ್ಧಾ ಭಕ್ತಿಯಿಂದ ಪೂಜೆ
ಸಲ್ಲಿಸಿ ಹೋಳಿ ಹಬ್ಬದ ಆಚರಣೆಯನ್ನು ಆರಂಭಿಸಿ 3
ದಿನಗಳ ಬಳಿಕ ಹುಣ್ಣಿಮೆಯ ದಿನದಂದು ಹೋಳಿ
ದಹನದೊಂದಿಗೆ ಹೋಳಿ ಅಚರಣೆಯನ್ನು
ಮುಕ್ತಾಯಗೊಳಿಸುತ್ತಾರೆ. ಮಾ.7 ನೇ ಗುರುವಾರ ರಾತ್ರಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪುನರ್ ಪ್ರತಿಷ್ಠೆ,ಮಾ 8ನೇ ಶುಕ್ರವಾರ ಬ್ರಹ್ಮ ಕಲಶೋತ್ಸವ,ಪುನರ್ ಪ್ರತಿಷ್ಠಾಪನಾ ಮಹೋತ್ಸವ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ,ಅನ್ನ ಸಂತರ್ಪಣೆ ನಡೆಯಲಿದೆ.