ಅಥಣಿ-

ಬಹುದಿನಗಳ ಬಹು ಜನರ ಬೇಡಿಕೆಯಾದ ಅಥಣಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಅಥಣಿ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಅಥಣಿಯನ್ನು ರಾಜ್ಯದ 32 ನೇ ಜಿಲ್ಲೆಯನ್ನಾಗಿ ಘೋಷಣೆ ಮಾಡಲು ಆಗ್ರಹಿಸಿ ಡಿಸೆಂಬರ್ 11ರಂದು ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ.

ಪ್ರತಿಭಟನಾ ರ‍್ಯಾಲಿಯು ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡು ಗಚ್ಚಿನಮಠ-ಪೇಟೆಯ ಮುಖ್ಯರಸ್ತೆ-ಅಂಬೇಡ್ಕರ ಸರ್ಕಲ್-ಶಿವಯೋಗಿ ಸರ್ಕಲ್-ಬಸವೇಶ್ವರ ಸರ್ಕಲ್ ದಲ್ಲಿ ಸಮಾವೇಶಗೊಳ್ಳಲಿದೆ.

ಸಮುದಾಯದ ಜನರು, ಸಂಘ ಸಂಸ್ಥೆಗಳು, ರೈತ ಬಾಂಧವರು, ಸೈನಿಕರು, ನ್ಯಾಯವಾದಿಗಳು, ವ್ಯಾಪಾರಸ್ಥರು, ಪತ್ರಿಕೆ ಟಿ. ವಿ. ಮಾಧ್ಯಮ ಮಿತ್ರರು, ವೈದ್ಯರು, ಕನ್ನಡ ಸಂಘಟನೆಗಳು, ಸಾಮಾಜಿಕ ಹೋರಾಟಗಾರರು, ಸಾಹಿತಿಗಳು, ಶಿಕ್ಷಕರು, ಸರಕಾರಿ ನೌಕರರು, ಪಿಂಚಣಿದಾರರು, ವಿದ್ಯಾರ್ಥಿಗಳು ಕುಶಲ ಕರ್ಮಿಗಳು, ಚಾಲಕ ಸಂಘದವರು, ಗ್ರಾಮ, ತಾಲೂಕು ಪಂಚಾಯತ ಸದಸ್ಯರು, ಪುರಸಭೆ ಸದಸ್ಯರು, ಎಲ್ಲ ರಾಜಕೀಯ ಪಕ್ಷದ ಸದಸ್ಯರು, ಮಹಿಳಾ ಸಂಘಟನೆಯ ಸದಸ್ಯರು ಭಾಗವಹಿಸುವಂತೆ ಅಥಣಿ ಜಿಲ್ಲಾ ಹೋರಾಟ ಸಮಿತಿ ಸದಸ್ಯರು ಆಗ್ರಹಿಸಿದ್ದಾರೆ.