ಬೆಳಗಾವಿ: ನೀರಾವರಿ ಇಲಾಖೆಯ ನೋಟಿಸ್ ಗೆ ಹೆದರದ ಹುಕ್ಕೇರಿ ತಾಲೂಕಿನ ಮಾಸ್ತಿಹೊಳಿ ಗ್ರಾಮದ ರೈತರು ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಹಿಡಕಲ್ ಜಲಾಶಯದ ಹಿನ್ನೀರಿನ ಹಿನ್ನೆಲೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ನೀರಾವರಿ ಇಲಾಖೆಯಿಂದ ನಿಮ್ಮ ಜಮೀನನ್ನು ಭೂಸ್ವಾಧೀನ ಪಡಿಸಿಕೊಂಡಿದ್ದೇವೆ ಎಂದು ರೈತರಿಗೆ ನೋಟಿಸ್ ನೀಡಿದ್ದರು. ಇದರಿಂದ ಕೆರಳಿದ ರೈತರು ಸಿವಿಲ್ ಮುಖ್ಯ ಇಂಜಿನಿಯರ ಬಿ. ಆರ್. ರಾಠೋಡ್ ಕಚೇರಿಗೆ ಮುತ್ತಿಗೆ ಹಾಕಿ ಹರಿಹಾಯ್ದರು.
ಭೂ ಸ್ವಾಧೀನ ಪಡೆಸಿಕೊಂಡಿದ್ದೇವೆ ಎಂದು ರೈತರಿಗೆ ನೋಟಿಸ್ ನೀಡಿದ ಅಧಿಕಾರಿಗಳು. ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡದ ಹಿನ್ನಲೆ ಪ್ರತಿಭಟನೆ ನಡೆಸಿದರು. ಸಿವಿಲ್ ಮುಖ್ಯ ಇಂಜಿನಿಯರ ಬಿ ಆರ್ ರಾಠೋಡ್ ಅವರ ಜೊತೆ ವಾಗ್ವಾದ ನಡೆಸಿದ ರೈತರು. ಕಚೇರಿ ಒಳಗೆ ಕುಳಿತುಕೊಂಡ ಪರಿಹಾರದಿಂದ ವಂಚಿತರಾದ ರೈತರಿಂದ ಕಚೇರಿ ಮುತ್ತಿಗೆ ಹಾಕಿದರು.
ಮಾಸ್ತಿಹೊಳಿ ಗ್ರಾಮದ ರೈತ ಮುಖಂಡರು ಮಾತನಾಡಿ, ಜಿಲ್ಲಾ ಉಸ್ತುವಾರಿ ಸತೀಶ್ ಜಾರಕಿಹೊಳಿ ರವರಿಗೆ ಪರಿಹಾರ ಹಣ ಒದಗಿಸಿ ಕೊಡಲು ಮನವಿ ಸಲ್ಲಿಸಿದವು. ಸಚಿವರು ಫೆ.28 ರ ವರಗೆ ಕಾಯಿರಿ ಎಂದು ಹೇಳಿದ್ದರು, ಆದರೆ ನೀರಾವರಿ ಇಲಾಖೆ ಅಧಿಕಾರಿ ಸತೀಶ್ ಜಾರಕಿಹೊಳಿ ಯವರಿಗೆ ತಿಳಿಸದೆ ಅಧಿಕಾರಿಗಳು ನೋಟಿಸ್ ಕಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.