ಆರ್ಡಿ : ದೇಶದ ಪ್ರಧಾನಮಂತ್ರಿಗಳ ಕನಸಿನ ಆಶಯದಂತೆ ದೇಶದ ಎಲ್ಲಾ ದೇವಸ್ಥಾನ, ಮಠ ಮಂದಿರಗಳ ಸ್ವಚ್ಛತೆಯ ಪರಿಕಲ್ಪನೆಗೆ ಕೆರ್ಜಾಡಿ ಶ್ರೀ ದುರ್ಗಾಪರಮೇಶ್ವರಿ ಸಹ ಪರಿವಾರ ದೇವಸ್ಥಾನವನ್ನು ಜಿಲ್ಲಾ ಯುವ ಪ್ರಶಸ್ತಿ ವಿಜೇತ ಅಭಿಮಾನಿ ಸ್ಪೋರ್ಟ್ಸ್ ಕ್ಲಬ್ (ರಿ) ಆರ್ಡಿ ಇದರ ಸರ್ವ ಸದಸ್ಯರ ಸಂಪೂರ್ಣ ಸಹಕಾರದೊಂದಿಗೆ ಸ್ವಚ್ಛತೆಯ ಕಾರ್ಯ ಮಾಡಲಾಯಿತು.
ಇವರೊಂದಿಗೆ ಶ್ರೀ ದುರ್ಗಾ ಸೇವಾ ಬಳಗ ಕೆರ್ಜಾಡಿ ಆರ್ಡಿ ಇದರ ಸದಸ್ಯರು ಪಾಲ್ಗೊಂಡು ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸಿದರು.
ಅಭಿಮಾನಿ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಸುದರ್ಶನ್ ಶೆಟ್ಟಿ, ಆರ್ಡಿ ಗೌರವ ಸಲಹೆಗಾರ ಸುದೀಪ್ ಹೆಗ್ಡೆ ಶೇಡಿಮನೆ, ಉಪಾಧ್ಯಕ್ಷ ಹರೀಶ್ ಹೆಗ್ಡೆ ಅರಸಮ್ಮಕಾನು, ಸಂತೋಷ ಪೂಜಾರಿ ಆರ್ಡಿ, ಮಾಧ್ಯಮ ಪ್ರತಿನಿಧಿ ಗಣೇಶ್ ಆಚಾರ್ಯ ಆರ್ಡಿ, ಕ್ರೀಡಾ ಕಾರ್ಯದರ್ಶಿ ರಾಘವೇಂದ್ರ ಪೂಜಾರಿ ಆರ್ಡಿ, ಕಾರ್ಯದರ್ಶಿ ಗಣೇಶ್ ಶೆಟ್ಟಿ ಆರ್ಡಿ ಉಪ ಕಾರ್ಯದರ್ಶಿ ರಾಜು ಕೊಂಜಾಡಿ, ಸದಸ್ಯರಾದ ಗಣೇಶ ಕೊಠಾರಿ ಕೊಂಜಾಡಿ, ಶಬರೀಶ್ ಆಚಾರ್ಯ, ಭರತ್ ಕೊಂಜಾಡಿ, ಯಶವಂತ ಆರ್ಡಿ, ಪ್ರಥ್ವಿರಾಜ್ ಆರ್ಡಿ, ಗಣೇಶ ಆಚಾರ್ಯ ಗುಡ್ಡೆಯಂಗಡಿ, ಅಜಿತ್ ಕೊಠಾರಿ, ಗುರುಕಿರಣ್ ಆರ್ಡಿ, ರುದ್ರಯ್ಯ ಆಚಾರ್ಯ,. ಮಹೇಶ್ ಕೊಂಜಾಡಿ, ರವಿ ಕೊಂಜಾಡಿ, ರಾಘು ಕೊಂಜಾಡಿ, ಪ್ರಸಾದ್ ಕೊಂಜಾಡಿ, ಸುಮಂತ್ ಆರ್ಡಿ ಭಾಗವಹಿಸಿದ್ದರು.