ಬೆಳಗಾವಿ ಸುವರ್ಣವಿಧಾನಸೌಧ :
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ್ ಗುರುವಾರ ಬೆಳೆಗಾವಿ ಸುವರ್ಣಸೌಧದ ಬಳಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭೇಟಿ ಮಾಡಿ ಅಹವಾಲು ಆಲಿಸಿದರು.
ಇದೇ ವೇಳೆ ರೈತರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಅವರು ಸರ್ಕಾರಕ್ಕೆ ರೈತರ ಬಗ್ಗೆ ವಿಶೇಷ ಕಾಳಜಿ ಇದೆ. ರೈತರ ಪರ ಕೆಲಸವನ್ನು ಸರ್ಕಾರ ಮಾಡುತ್ತಿದೆ. ರೂ.38,000 ಕೋಟಿ ಸದ್ಯ ಸರಕಾರಕ್ಕೆ ಹೊರೆಯಾಗಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಂತ ಹಂತವಾಗಿ ಕೃಷಿ ಇಲಾಖೆಯ ಖಾಲಿ ಇರುವ ಎಲ್ಲಾ ಹುದ್ದೆಗಳನ್ನ ತುಂಬುಲು ಸಮ್ಮತಿ ನೀಡಿದ್ದಾರೆ.ನಮ್ಮ ಸರ್ಕಾರದಲ್ಲಿ ರೈತರ ಎಲ್ಲಾ ಸಮಸ್ಯೆಗಳನ್ನು ಇಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಚರ್ಚಿಸಲು ಸೋಮವಾರ ಸುವರ್ಣ ಸೌಧದಲ್ಲಿ ಸಭೆ ಕರೆಯುತ್ತೆನೆ. ಈ ಸಭೆಗೆ ಶಾಸಕ ದರ್ಶನ್ ಪುಟ್ಟಣಯ್ಯ ಹಾಗೂ ಕೆಲವು ರೈತ ಪ್ರತಿನಿಧಿಗಳಿಗೂ ಆಹ್ವಾನಿಸುತ್ತೇನೆ. ರೈತರಿಗೆ ಬರ ಪರಿಹಾರದ ಮೊದಲನೆಯ ಕಂತು 2000 ಹಣವನ್ನ ರೈತರಿಗೆ ಬಿಡುಗಡೆ ಮಾಡಲಾಗುತ್ತಿದೆ. ನಾನು ಕೂಡಾ ಒಬ್ಬ ರೈತ. ಹಾಗಾಗಿ ರೈತರ ಪರವಾಗಿ ಮುಖ್ಯಮಂತ್ರಿಗಳ ಮನವೊಲಿಸಿ ಬೇಡಿಕೆ ಇಡೇರಿಸುತ್ತೇನೆ ಸಚಿವ ಎನ್ ಚಲುವರಾಯಸ್ವಾಮಿ ರೈತರಿಗೆ ಭರವಸೆ ನೀಡಿದರು.