ಬೆಳಗಾವಿ: ‘ಹಿಡಕಲ್ ಜಲಾಶಯದಿಂದ ಪ್ರಟಪ್ರಭಾ ಬಲದಂಡೆ, ಎಡದಂಡೆ ಹಾಗೂ ಉಪಕಾಲುವೆಗೆ 10 ದಿನಗಳ ಕಾಲ ನೀರು ಹರಿಸಲು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಆದೇಶ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ವಿಷಯ ತಿಳಿಸಿದ ಅವರು, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹಿಡಿಕಲ್‌ ಜಲಾಶಯದದಿಂದ ಘಟಪ್ರಭಾ ಎಡದಂಡೆ ಜಿ.ಎಲ್‌.ಬಿ.ಸಿ ಕಾಲುವೆಗೆ ದಿನಾಂಕ.01-01-2024 ರಿಂದ 10-01-2024ರವೆರೆಗೆ ಒಟ್ಟು 10 ದಿನಗಳ ಕಾಲ ಹಾಗೂ ಘಟಪ್ರಭಾ ಬಲದಂಡೆ ಜೆ.ಆರ್.‌ಬಿ.ಎಸ್.‌ ಚಿಕ್ಕೋಡಿ ಉಪ (ಸಿಬಿಎಸ್) ಹಾಗೂ ಮಾರ್ಕೆಂಡೆ ಕಾಲುವೆಗಳಿಗೆ ದಿನಾಂಕ 11-01-2024 ರಿಂದ 20-01-2024 ರವರೆಗೆ ಒಟ್ಟು 10 ದಿನಗಳ ಕಾಲ ನೀರನ್ನು ಕಾಲುವೆಗಳಿಗೆ ಹರಿಸಲು ಸಚಿವ ಸತೀಶ್‌ ಜಾರಕಿಹೊಳಿ ಆದೇಶ ಹೊರಡಿಸಿದ್ದಾರೆ.
ಆದ್ದರಿಂದ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಭಾಗದ ರೈತರು ಹಾಗೂ ಸಾರ್ವಜನಿಕರು ನೀರನ್ನು ಪೋಲಾಗದಂತೆ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದ್ದಾರೆ.