ಆಗುಂಬೆ: ಮಲೆನಾಡು ಹಾಗೂ ಕರಾವಳಿಯನ್ನು ಸಂಪರ್ಕಿಸುವ ಪ್ರಸಿದ್ಧ ಆಗುಂಬೆ ಘಾಟಿಯ ಐದನೇ ತಿರುವಿನಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತ ಆರಂಭವಾಗಿದೆ.ಮೂರು ವರ್ಷಗಳ ಹಿಂದೆ ಆರನೇ ತಿರುವಿನಲ್ಲಿ ಘಾಟಿ ಕುಸಿದಿತ್ತು. ಇದೀಗ ಐದನೇ ತಿರುವಿನಲ್ಲಿ ಘಾಟಿ ಕುಸಿದಿರುವ ಕಾರಣ ವಾಹನ ಸವಾರರು ಎಚ್ಚರಿಕ್ಕೆ ವಹಿಸಬೇಕಾಗಿದೆ.ಇನ್ನಷ್ಟು ಘಾಟಿ ಕುಸಿತ ಸಾಧ್ಯತೆ ಇದ್ದು ರಸ್ತೆಯ ಮೇಲೆ ಕಲ್ಲುಗಳು ಬಿದ್ದಿವೆ. ಇದರ ತೆರವು ಕಾರ್ಯಾಚರಣೆ ಆರಂಭವಾಗಿದೆ. ಈಗಾಗಲೇ ಭಾರಿ ವಾಹನಗಳ ಸಂಚಾರವನ್ನು ಜಿಲ್ಲಾಧಿಕಾರಿಗಳು ನಿರ್ಬಂಧಿಸಿದ್ದು, ತೀರ್ಥಹಳ್ಳಿಯಿಂದ ಉಡುಪಿ- ಕುಂದಾಪುರಕ್ಕೆ ಹೋಗುವ ವಾಹನಗಳು ಹುಲಿಕಲ್ ಮಾರ್ಗವಾಗಿ ಸಂಚರಿಸುತ್ತಿವೆ.