ಮಂಗಳೂರು : ದ.ಕ, ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಏ.26 ರಂದು ಲೋಕಸಭೆ ಚುನಾವಣೆಯ ಮತದಾನ ನಡೆಯುತ್ತದೆ. ಹಾಗಾಗಿ ಏ.20ರ ನಂತರ ಚುನಾವಣಾ ಪ್ರಚಾರದ ಕೊನೆ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರಾವಳಿಗೆ ಆಹ್ವಾನಿಸಲು ಚಿಂತಿಸಲಾಗಿದೆ. ದ.ಕ. ಅಥವಾ ಉಡುಪಿ ದೇಶ ಜಿಲ್ಲೆಯಲ್ಲಿ ಮೋದಿ ಅವರ ಸಮಾವೇಶ ಆಯೋಜಿಸಲು ಮುಖಂಡರು ಯೋಚಿಸುತ್ತಿದ್ದಾರೆ. ನರೇಂದ್ರ ಮೋದಿ ಅವರ ಕರ್ನಾಟಕ ಪ್ರವಾಸ ನಿಗದಿ ವೇಳೆ ಕರಾವಳಿ ಭೇಟಿ ಅಂತಿಮಗೊಳ್ಳುವ ಸಾಧ್ಯತೆ ಇದೆ. ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಕರೆ ತರುವ ಪ್ರಯತ್ನ ನಡೆದಿದೆ.