ಬೆಂಗಳೂರು: ನಿರೀಕ್ಷೆಯಂತೆ ಜೂನ್ ಮೊದಲ ವಾರದಲ್ಲಿ
ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದ್ದು, ಆರಂಭದಲ್ಲಿ ಮುಂಗಾರು ಅಷ್ಟೊಂದು ಪ್ರಬಲವಾಗಿರುವುದಿಲ್ಲ ಎಂದು ಹವಾಮಾನ ಇಲಾಖೆಯ ತಜ್ಞರು ಮಾಹಿತಿ ನೀಡಿದ್ದಾರೆ. ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ರೆಮಲ್ ಚಂಡಮಾರುತದಿಂದ ಮುಂಗಾರು ಆರಂಭದಲ್ಲಿ ಯಾವುದೇ ಬದಲಾವಣೆಯ ಲಕ್ಷಣಗಳಿಲ್ಲ. ಮೇ 31 ಅಥವಾ ಜೂನ್ 1ಕ್ಕೆ ಕೇರಳ ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ. ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಆಗಮನ ಸಾಧ್ಯತೆ ಇದೆ.