ಹೊಸದಿಲ್ಲಿ: ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಬುಧವಾರ ಆರು ಮಂದಿ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ.

ಕರ್ನಾಟಕದಿಂದ ಅಜಯ್ ಮಾಕೆನ್, ಡಾ. ಸಯ್ಯದ್ ನಾಸಿರ್ ಹುಸೇನ್ ಮತ್ತು ಜಿ.ಸಿ.ಚಂದ್ರಶೇಖರ್ ಅಭ್ಯರ್ಥಿಗಳಾಗಲಿದ್ದಾರೆ.

ತೆಲಂಗಾಣದಿಂದ ಹಿರಿಯ ನಾಯಕಿ ರೇಣುಕಾ ಚೌಧರಿ ಕಣಕ್ಕಿಳಿಯಲಿದ್ದು, ಆರು ವರ್ಷಗಳ ನಂತರ ರಾಜ್ಯಸಭೆಗೆ ಮರಳಲಿದ್ದಾರೆ. ಯುವ ಎಂ. ನಾಯಕ ಅನಿಲ್ ಯಾದವ್ ಅವರು ತೆಲಂಗಾಣದಿಂದ ಇನ್ನೋರ್ವ ಅಭ್ಯರ್ಥಿಯಾಗಲಿದ್ದಾರೆ.
ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ರಾಜಸ್ಥಾನದಿಂದ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಜತೆಯಲ್ಲಿದ್ದರು.
ಮಹಾರಾಷ್ಟ್ರದಿಂದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಚಂದ್ರಕಾಂತ್ ಹಂದೋರೆ, ಹಿಮಾಚಲ ಪ್ರದೇಶದಿಂದ ಅಭಿಷೇಕ್ ಮನು ಸಿಂಘ್ವಿ, ಬಿಹಾರದಿಂದ ಡಾ. ಅಖಿಲೇಶ್ ಪ್ರಸಾದ್ ಸಿಂಗ್ ಕಣಕ್ಕಿಳಿಯಲಿದ್ದಾರೆ.

ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿದ್ದ ಎಲ್.ಹನುಮಂತಯ್ಯ ಅವರಿಗೆ ಮತ್ತೊಂದು ಅವಕಾಶ ನಿರಾಕರಿಸಲಾಗಿದ್ದು, ಪಕ್ಷವು ಖಜಾಂಚಿ ಮಾಕನ್ ಅವರಿಗೆ ಅವಕಾಶ ನೀಡಿದೆ.