ಬೆಳಗಾವಿ : ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ವಾಣಿಜ್ಯ ಶಾಸ್ತ್ರ ವಿಭಾಗದ ಡೀನ್, MBA ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಸಿ.ಎಂ.ತ್ಯಾಗರಾಜ್ ಅವರನ್ನು ಅವರನ್ನು ರಾಜ್ಯಪಾಲ ತಾವರಚಂದ ಗೆಹಲೋಟ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಮುಂದಿನ ನಾಲ್ಕು ವರ್ಷಗಳ ಅವಧಿಗೆ ಈ ನೇಮಕಾತಿ ಮಾಡಲಾಗಿದೆ.

ಮೂಲತಃ ಚಿಕ್ಕಮಗಳೂರಿವರಾದ ತ್ಯಾಗರಾಜ್ ಅವರು ಶಿವಮೊಗ್ಗ, ಬೆಂಗಳೂರು, ಬೆಳಗಾವಿ ವಿಶ್ವವಿದ್ಯಾಲಯದಲ್ಲಿ ಹಿರಿಯ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.