ಲಕ್ಷದ್ವೀಪ : ಜಟಾಯು ಹೆಸರಿನ ನೌಕಾನೆಲೆ ಸ್ಥಾಪನೆಗೆ ಭಾರತದ ಸಿದ್ದತೆ ತೆರೆಮರೆಯಲ್ಲೇ ನಡೆದಿದೆ. ಅರಬ್ಬಿ ಸಮುದ್ರದಲ್ಲಿ ಭಾರತದ ಬಲ ವೃದ್ಧಿಯಾಗಲಿದ್ದು, ವಿದೇಶಿ ಶಕ್ತಿಗಳು, ಕಡಲ್ಗಳ್ಳರ ಮೇಲೆ ಕಣ್ಣಾವಲಿಗೆ ಅವಕಾಶವಾಗಲಿದೆ.

ಈ ಮೂಲಕ ಭಾರತದ ವಿರುದ್ಧ ಸೆಟೆದು ನಿಂತಿರುವ
ಮಾಲ್ಮೀವ್‌ಗೆ ಸಡ್ಡು ಹೊಡೆಯಲಿದ್ದು ಆ ಪುಟ್ಟ ದೇಶದ ಸನಿಹವೇ ನೌಕಾನೆಲೆ ಸ್ಥಾಪನೆಯಾಗಲಿದೆ.

ಲಕ್ಷದ್ವೀಪದ ಕೊನೆಯಲ್ಲಿ ನೌಕಾನೆಲೆ ಸ್ಥಾಪನೆ ಈ ಜಾಗದಿಂದ ಮಾಲ್ಮೀಮ್ಸ್‌ಗೆ 130 ಕಿ.ಮೀ. ಅಂತರ ಮಾತ್ರ.
ಮಾಲ್ಮೀವ್‌ಗೆ ಸನಿಹದಲ್ಲೇ ನೌಕಾ ನೆಲೆ ಸ್ಥಾಪನೆ ಮಾಡುವ ಮೂಲಕ ದ್ವೀಪರಾಷ್ಟ್ರಕ್ಕೆ ಸಡ್ಡು ಹೊಡೆಯಲು ಭಾರತ ಮಂದಾಗಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಸದ್ದಿಲ್ಲದೆ ಮಾಲ್ಡೀವ್ಸ್ ಮೇಲೆ ಈ ಸಲ ಗದಾಪ್ರಹಾರಕ್ಕೆ ಮುಂದಾಗಿದ್ದಾರೆ.

ಲಕ್ಷದ್ವೀಪದ ದಕ್ಷಿಣ ಭಾಗದಲ್ಲಿರುವ ಕೊನೆಯ ದ್ವೀಪ ಪ್ರದೇಶ ಮಿನಿಕಾಯ್‌ನಲ್ಲಿ ‘ಐಎನ್‌ಎಸ್‌ ಜಟಾಯು’ ಹೆಸರಿನ ವಾಯುನೆಲೆ ಸ್ಥಾಪನೆ ಮಾಡುವ ಉದ್ದೇಶ ಹೊಂದಿರುವುದಾಗಿ ಭಾರತೀಯ ನೌಕಾಪಡೆ ತಿಳಿಸಿದೆ. ಮಾಲ್ಮೀವ್‌ನಿಂದ ಉತ್ತರ ದಿಕ್ಕಿಗೆ ಉದ್ದೇಶಿತ ಸ್ಥಳ 130 ಕಿ.ಮೀ. ದೂರದಲ್ಲಿದೆ.

ಜಟಾಯು ವಾಯುನೆಲೆಯಿಂದ ಅರಬ್ಬಿ ಸಮು ದ್ರದಲ್ಲಿ ಭಾರತದ ಬಲ ವೃದ್ಧಿಯಾಗಲಿದೆ. ಕಡಲ್ಗಳ್ಳರು ಹಾಗೂ ಮಾದಕ ವಸ್ತು ದಂಧೆ ವಿರುದ್ಧದ ಹೋರಾಟಕ್ಕೆ ಬಲ ಸಿಗಲಿದೆ. ಜತೆಗೆ ಭಾರತದ ಮುಖ್ಯ ಭೂಮಿ ಹಾಗೂ ಲಕ್ಷದ್ವೀಪ ನಡುವಣ ಸಂಪರ್ಕಕ್ಕೂ ಅನುಕೂಲವಾಗಲಿದೆ.