ಮೂಡುಬಿದಿರೆ: ಹಿರಿಯ ಕಂಬಳ ವಿದ್ವಾಂಸ, ಕಂಬಳ ಅಕಾಡೆಮಿ ಸಂಸಾಪಕ ಸಂಚಾಲಕ, ಮೂಡುಬಿದಿರೆ ಜೈನ ಪ.ಪೂ. ಕಾಲೇಜಿನ ನಿವೃತ್ತ ಪ್ರಾಚಾರ್ಯ ಕೆ. ಗುಣಪಾಲ ಕಡಂಬ ಅವರು ಬೆಂಗಳೂರಿನ ದಕ್ಷಿಣ ಕನ್ನಡ ಜೈನ ಮೈತ್ರಿಕೂಟ ಕೊಡಮಾಡುವ ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಭಾನುವಾರ ಅಪರಾಹ್ನ 3.30 ಕ್ಕೆ ಬೆಂಗಳೂರು ಬಸವನಗುಡಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ತಮಿಳುನಾಡು ಅರಿಹಂತಗಿರಿಯ ಜಗದ್ಗುರು ಸ್ವಸ್ತಿ ಶ್ರೀ ಡಾ. ಧವಲಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿಗೆ ಪಾತ್ರರಾಗಿರುವ ದೃಶ್ಯ ಮಾಧ್ಯಮ ಪತ್ರಕರ್ತೆ ನವಿತಾ ಜೈನ್‌ ಅವರನ್ನೂ ಸಮ್ಮಾನಿಸಲಾಗುವುದು ಎಂದು ಮೈತ್ರಿಕೂಟದ ಸ್ಥಾಪಕ ಅಧ್ಯಕ್ಷ ಡಿ. ಸುರೇಂದ್ರಕುಮಾ‌ರ್, ಸ್ಥಾಪಕ ಕಾರ್ಯಾಧ್ಯಕ್ಷ ಕೆ.ಬಿ. ಯುವರಾಜ್ ಬಲ್ಲಾಳ್ ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.