ತಿಪಟೂರು : ತಿಪಟೂರು ತಾಲೂಕಿನ ನೊಣವಿನಕೆರೆಯ ಯಶವಂತ ಗುರೂಜಿ ಸ್ಪೋಟಕ ಭವಿಷ್ಯ ನುಡಿದಿದ್ದು ಈ ಬಾರಿ ಮಹಿಳಾ ಪ್ರಧಾನಿ ದೇಶಕ್ಕೆ ಸಿಗಲಿದ್ದಾರೆ ಎಂದಿದ್ದಾರೆ. ಈ ಬಾರಿ ದೇಶದ ಚುಕ್ಕಾಣಿಯನ್ನು ಕಾಂಗ್ರೆಸ್ ಪಕ್ಷ ಹಿಡಿಯಲಿದೆ.

ಮಹಿಳಾ ಪ್ರಧಾನಿಯಾಗಿ ಪ್ರಿಯಾಂಕಾ ಗಾಂಧಿ ಅಧಿಕ್ಕಾರಕ್ಕೇರಲಿದ್ದಾರೆ ಎಂದು ಗುರೂಜಿ ಶಿವರಾತ್ರಿಯ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ 135 ಸೀಟು
ಪಡೆಯಲಿದೆ ಎಂದು ಈ ಹಿಂದೆ
ಗುರೂಜಿ ನಿಖರ ಭವಿಷ್ಯ ನುಡಿದಿದ್ದರು.
ಕೊರೊನಾ ಮಹಾಮಾರಿ ಬರುವ ಬಗ್ಗೆ, ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ
ಬಗ್ಗೆ ಗುರೂಜಿ ಭವಿಷ್ಯ ನುಡಿದಿದ್ದರು. ಸದ್ಯ ಈಗ
ಮತ್ತೊಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಒಬ್ಬಳು ಸ್ತ್ರೀ, ಪುರುಷನ ಎದುರು ದುರ್ಗಿಯಾಗಿ ನಿಂತು ಪುರುಷನಿಗೆ ಭಯ ಹುಟ್ಟಿಸಿ
ತಾನೇ ಅಧಿಕಾರವನ್ನು ಮಾಡುವಳು.

ತಾಯಿ ಮಮತೆಯಿಂದ ತನ್ನ ಅಧಿಕಾರವನ್ನು ಮಾತೃ ವಾತ್ಸಲ್ಯದಿಂದ ಪರರಿಗೆ ಬಿಟ್ಟುಕೊಡುವಳು. ಹೀಗಂತಾ ಕಾಲಜ್ಞಾನದಲ್ಲಿ ಉಲ್ಲೇಖವಾದ ಚುನಾವಣಾ ಭವಿಷ್ಯವನ್ನು ನುಡಿದಿದ್ದಾರೆ.

ಪ್ರಿಯಾಂಕಾ ಬಳಿಕ ರಾಹುಲ್ ಗಾಂಧಿಗೆ ಹುದ್ದೆ ಬಿಟ್ಟು ಕೊಡುವ ಸಾಧ್ಯತೆ ಇದೆ. ಶಿವರಾತ್ರಿಗೂ ಮುನ್ನ ಚುನಾವಣೆ ನಡೆದಿದ್ದರೇ ಮೋದಿ ಅವರಿಗೆ ಪ್ರಧಾನಿಯಾಗುವ ಯೋಗವಿತ್ತು. ಆದರೇ ಈಗ ಮೋದಿ ಅವರಿಗೆ ಆ ಯೋಗ ಇಲ್ಲ. ಅವರಿಗೆ ಅನಾರೋಗ್ಯ ಕಾಡಬಹುದು. ಸದ್ಯ ಪ್ರಿಯಾಂಕಾ ಗಾಂಧಿಗೆ ಹಂಸಕ, ಚಂದ್ರಮಂಗಳ, ಬುಧಾಧಿತ್ಯ ಯೋಗ ಶುರುವಾಗಿದೆ. ಈ ಯೋಗದಿಂದಲೇ ಪ್ರಧಾನಿ ಪಟ್ಟ ಸಿಗುವ ಅವಕಾಶ ಒದಗಿಬರಲಿದೆ. ಅನ್ಯ ಪಕ್ಷಗಳ ಬಲದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಭವಿಷ್ಯ ಇದೆ ಎಂದು ಗುರೂಜಿ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ.