ಬೆಂಗಳೂರು : ಲೋಕ ಅಖಾಡಕ್ಕೆ ರಾಜಕೀಯ ನಾಯಕರು ಸಿದ್ದರಾಗಿದ್ದು, ಜಿಲ್ಲೆ ಜಿಲ್ಲೆಗಳಲ್ಲೂ ಸುತ್ತಾಡಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಅದರಲ್ಲೂ, ಲಕ್ಷ ಲಕ್ಷ ಬಾಡಿಗೆ ಕೊಟ್ಟು ನಾಯಕರು ಹೆಲಿಕಾಪ್ಟರ್​​ಗಳಲ್ಲಿ ಸವಾರಿ ಮಾಡುತ್ತಿದ್ದಾರೆ. ಮತಬೇಟೆಗೆ ಸುತ್ತಾಡುವ ನಾಯಕರಿಗಾಗಿ ನೂರಾರು ಹೆಲಿಕಾಪ್ಟರ್​ಗಳನ್ನು ಈಗಾಗಲೇ ಕಾಯ್ದಿರಿಸಲಾಗಿದೆ.​ ದುಬಾರಿ ಬೆಲೆಯಲ್ಲಿ ಹೆಲಿಕಾಪ್ಟರ್ ಬೆಲೆಗಳಿವೆ.

ಈಗಾಗಲೇ 150 ಹೆಲಿಕಾಪ್ಟರ್​ ಹಾಗೂ ಮಿನಿ ವಿಮಾನ ಬುಕ್ ಆಗಿವೆ. ಹೆಲಿಕಾಪ್ಟರ್​​ಗಳ ಬಾಡಿಗೆ ದರದಲ್ಲಿ ಶೇ 20ರಿಂದ 30ರಷ್ಟು ಹೆಚ್ಚಾದರೂ ರಾಜಕೀಯ ನಾಯಕರು ತಲೆಕೆಡಿಸಿಕೊಳ್ಳಲ್ಲ. ಆದರೆ ಹೆಲಿಕಾಪ್ಟರ್ ಬಾಡಿಗೆ ಕೇಳಿದರೆ ನೀವು ಶಾಕ್ ಆಗ್ತಿರಾ,
2 ಸೀಟ್​​​ನ ಹೆಲಿಕಾಪ್ಟರ್​​ ಗಂಟೆಗೆ 2.10 ಲಕ್ಷ ರೂ.
4 ಆಸನದ ಹೆಲಿಕಾಪ್ಟರ್​ ಗಂಟೆಗೆ 2.50 ಲಕ್ಷ ರೂ.
6 ಆಸನದ ಮಿನಿ ವಿಮಾನ ಗಂಟೆಗೆ 3 ಲಕ್ಷ ರೂ.
8 ಆಸನದ ಮಿನಿ ವಿಮಾನ ಗಂಟೆಗೆ 3.5 ಲಕ್ಷ ರೂ.
13 ಆಸನದ ಮಿನಿ ವಿಮಾನ ಗಂಟೆಗೆ 4 ಲಕ್ಷ ರೂ.ಆಗಿದೆ.