ಆರ್ಡಿ: ಆರ್ಡಿ ಸಮೀಪದ ಕೆರ್ಜಾಡಿ ಚಿತ್ತೇರಿ ಶ್ರೀದುರ್ಗಾಪರಮೇಶ್ವರಿ ಸಪರಿವಾರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬುಧವಾರ ಸಂಪನ್ನಗೊಂಡಿದೆ. ಪ್ರಾರ್ಥನೆ, ಗುರುಗಣಪತಿ ಪೂಜೆ,ಪುಣ್ಯಾಹವಾಚನ,ನವಕ ಪ್ರಧಾನ ಹೋಮ, ಜಗ್ಲುಗುಡ್ಡೆ ಪ್ರೇಮಾ ಬಾಬು ಶೆಟ್ಟಿ ಹಾಗೂ ಮಕ್ಕಳಿಂದ ಚಂಡಿಕಾಹೋಮ ಸೇವೆ, ತುಲಾಭಾರ ಸಂಕಲ್ಪ,
ಹರಿವಾಣ ನೈವೇದ್ಯ, ತುಲಾಭಾರ ಸೇವೆ, ಪಂಚಾಮೃತ
ಸಹಿತ ಕಲಶಾಭಿಷೇಕ, ಮಹಾಪೂಜೆ, ಚಂಡಿಕಾಹೋಮದ ಪೂರ್ಣಾಹುತಿ, ತೀರ್ಥ ಪ್ರಸಾದ,
ಮಧ್ಯಾಹ್ನ ಅನ್ನಪ್ರಸಾದ, ಶ್ರೀನಾಗ ಕನ್ನಿಕಾ ಭಜನಾ ಬಳಗ ಅರಸಮ್ಮಕಾನು ಮತ್ತು ಅತಿಥಿ
ಗಾಯಕರುಗಳಿಂದ ಭಜನಾ ಗಾನಾಮೃತ,ಸಂಜೆ
ಶ್ರೀದುರ್ಗಾಪರಮೇಶ್ವರಿ ಭಜನಾ ಮಂಡಳಿ,ಚಿತ್ತೇರಿ
ಆರ್ಡಿ.ಶ್ರೀದುರ್ಗಾಪರಮೇಶ್ವರಿ ಭಜನಾ
ಮಂಡಳಿ(ರಿ.)ಕೊಂಜಾಡಿ, ಶ್ರೀಲಕ್ಷ್ಮಿ ನಾರಾಯಣ ಭಜನಾ
ಮಂಡಳಿ(ರಿ.), ಹಳೆ ಸೋಮೇಶ್ವರ ನಾಡ್ಪಾಲ್ ತಂಡಗಳಿಂದ ಭಜನಾ ಕಾರ್ಯಕ್ರಮ, ರಂಗಪೂಜೆ, ಸಂದರ್ಶನ, ಸುತ್ತು ಬಲಿ , ಪ್ರಸಾದ ವಿತರಣೆ, ಅನ್ನಪ್ರಸಾದ,ಕಲ್ಲುಕುಟಿಗ ಮತ್ತು ಸತ್ಯದೇವತೆಗೆ ಸಿರಿ ಸಿಂಗಾರ ಕೋಲಸೇವೆ ನಡೆಯಿತು. ತಂತ್ರಿ ಗಿರೀಶ್ ಸೋಮಾಯಾಜಿ ಪಡುವಳ್ಳಿ, ಅರ್ಚಕ ಶ್ರೀನಿವಾಸ
ಭಟ್, ಸಹ ಅರ್ಚಕ ವೃಂದವರು,ಅರಸಮ್ಮಕಾನು
ಶ್ರೀನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಳದ
ಮೊಕ್ತೇಸರ ಚಂದ್ರಶೇಖರ ಶೆಟ್ಟಿ ಮೂಡುಬೈಲ್,ಅರ್ಚಕ
ನಾಗರಾಜ ಬಾಯರಿ ಗಂಗಡಬೈಲು, ಜ್ಯೋತಿಷ್ಯ ವಿದ್ವಾನ್ ಡಾ.ಅಭಿಷೇಕ್ ಬಾಯರಿ ಗಂಗಡಬೈಲು, ಕರ್ನಾಟಕ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಪ್ರಶಾಂತ ಶೆಟ್ಟಿ, ಕೆರ್ಜಾಡಿ ಚಿತ್ತೇರಿ ಶ್ರೀದುರ್ಗಾಪರಮೇಶ್ವರಿ ಸಪರಿವಾರ ದೇವಸ್ಥಾನದ
ಗೌರವಾಧ್ಯಕ್ಷ ಬಾಬು ಶೆಟ್ಟಿ ಜಗಲ್‌ಗುಡ್ಡೆ,ಅಧ್ಯಕ್ಷ ಯತಿರಾಜ್ ಶೆಟ್ಟಿ, ಸದಸ್ಯ ರಾಧಕೃಷ್ಣ ಮಯ್ಯ ಹೊನ್ಕಲ್,ಜಿ ಶಶಿಧರ ಶೆಟ್ಟಿ,ಕೆ.ದಿನಕರ ಶೆಟ್ಟಿ, ಸತೀಶ್‌ಕುಮಾರ್ ಶೆಟ್ಟಿ, ಸದಾಶಿವ ಶೆಟ್ಟಿ,
ಪ್ರತಿಮಾ ಎಸ್ ಶೆಟ್ಟಿ,ರಾಧ,ಊರ ಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು.