ವರ್ಷಂಪ್ರತಿ ಯಂತೆ ಅಧ್ಯಾತ್ಮ ಲೋಕದಲ್ಲಿ ನಿರಂತರ ಸಂಭ್ರಮ ದ ಕಾರ್ಯಕ್ರಮವನ್ನು ನಿರೂಪಿಸಿ ಸುಮಾರು ಇಪ್ಪತ್ತು ವರ್ಷಗಳ ಸಂಭ್ರಮ ಕಳೆದು ಇಪ್ಪತ್ತೊಂದರ ಸಂಭ್ರಮದಲ್ಲಿ ಅಧ್ಯಾತ್ಮ ರಹಸ್ಯ ಮಾಸಪತ್ರಿಕೆ ಅರ್ಪಿಸುವ 700 ಕ್ಕೂ ಅಧಿಕ ಕಾರ್ಯಕ್ರಮ ನಿರೂಪಿಸಿದ ಎಸ್. ಸತೀಶ್ ಕುಮಾರ್ ಕೋಟೇಶ್ವರ ಇವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ವರುಷದ ಕಾರ್ಯಕ್ರಮಕ್ಕೆ ಎಲ್ಲಾ ಕಲಾಭಿಮಾನಿಗಳಿಗೂ ಸ್ವಾಗತ ಸುಸ್ವಾಗತ!

ಈ ವರುಷ ಕರಾವಳಿ ಭಾಗದ ಹೆಸರಾಂತ ಶ್ರೀ ಗೋಪಾಡಿ ಗೆಂಡೋತ್ಸವ ಪ್ರಯುಕ್ತ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಂಯೋಜಿಸಿದ್ದಾರೆ. 2024 ರ ಜನವರಿ 26 ಮತ್ತು 27 ಎರಡು ದಿನಗಳ ಕಾಲ ವಿಶೇಷ ಕಾರ್ಯಕ್ರಮ 26 ಜನವರಿ ಶುಕ್ರವಾರ ಶುಭದಿನದಂದು ಶ್ರೀ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದಂಗಳವರು ಶಿರೂರು ಮಠ ಉಡುಪಿ ಇವರ ಗೌರವ ಉಪಸ್ಥಿತಿ ಕಾರ್ಯಕ್ರಮ ಉದ್ಘಾಟನೆ, ಆಶೀರ್ವಚನ ಸಾಧಕರಿಗೆ ಪ್ರಶಸ್ತಿ ಪ್ರದಾನ, ಸ್ಥಳೀಯ ಶಾಲಾ ಮಕ್ಕಳಿಗೆ ಕಲಿಯುವಿಕೆಯಲ್ಲಿ ಬಹುಮಾನ ವಿತರಣೆ ಹಾಗೂ ಕಲಾಭಿಮಾನಿಗಳಿಗೆ ಸಾಂಸ್ಕೃತಿಕ ಉತ್ತಮ ಕಲಾ ಪ್ರದರ್ಶನ ಕ್ಕೆ ವೇದಿಕೆ ಹಂಚಿಕೊಳ್ಳಲು ಅವಕಾಶ ಇದೆ.
ಹಾಗೆಯೇ ಅನೇಕ ಅತಿಥಿ ಅಭ್ಯಾಗತರು ಭಾಗವಹಿಸಲಿದ್ದಾರೆ.
ಜನವರಿ 27 ರಂದು ಪ್ರಸಿದ್ಧ ಗಾಯಕರಿಂದ ಗಾನ ಮಾಧುರ್ಯ ಮತ್ತು ಹೆಸರಾಂತ ಯೋಗ ಪಟುಗಳಿಂದ ಯೋಗ ಪ್ರದರ್ಶನ ಹಾಗೂ ಎಸ್. ಸತೀಶ್ ಕುಮಾರ್ ಕೋಟೇಶ್ವರ ಈ ವರುಷದ ಮೂರನೇ ಯಕ್ಷ ಕಲಾ ಕೃತಿ ಬಿಡುಗಡೆ ಮತ್ತು ಶ್ರೀ ಬ್ರಹ್ಮ ಲಿಂಗೇಶ್ವರ ಯಕ್ಷ ಕಲಾ ಸೇವಾ ಟ್ರಸ್ಟ್ ಇದರ ಸದಸ್ಯರು ಮತ್ತು ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಜೈ ಶ್ರೀ ರಾಮ್ ಎಂಬಾ ವಿಶೇಷ ಯಕ್ಷ ಪ್ರದರ್ಶನ ಇರುತ್ತದೆ……
ಈ ಎಲ್ಲಾ ಕಾರ್ಯಕ್ರಮಗಳಿಗೂ ಊರ ಮತ್ತು ಪರವೂರಿನ ಕಲಾಭಿಮಾನಿಗಳು ಆಗಮಿಸಿ ಆಶೀರ್ವದಿಸಿರಿ ಕಾರ್ಯಕ್ರಮ ದ ಯಶಸ್ವಿಗೆ ಸಂಪೂರ್ಣ ಸಹಕಾರ ನೀಡುವರೇ ವಿನಂತಿ
ಪ್ರಸಿದ್ಧ ವಾದ ಹಲವಾರು ದೇವಸ್ಥಾನಗಳಲ್ಲಿ ಮತ್ತು ಪ್ರಕೃತಿ ಯ ಸೊಬಗಿನ ಸಮುದ್ರ ತಟದಲ್ಲಿ ಹಾಗೂ ಕುಂದಾಪುರ ದ ಹೆಸರಾಂತ ನೆಹರೂ ಮೈದಾನದಲ್ಲಿ ಕೂಡ ಎಸ್ .ಸತೀಶ್ ಕುಮಾರ್ ಕೋಟೇಶ್ವರ ಇವರು ಕಾರ್ಯಕ್ರಮ ಸಂಯೋಜನೆ ಮತ್ತು ನಿರ್ದೆಶನ ಮಾಡಿ ಯಶಸ್ವಿಯಾದವರು….
9964183229/9620472014
[email protected]