ತಿರುವನಂತಪುರ:
ಮಕರ ಜ್ಯೋತಿಗಾಗಿ ಶಬರಿಮಲೆಗೆ ಆಗಮಿಸುತ್ತಿರುವ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಹೊಸ ನಿಯಮ ಜಾರಿಗೊಳಿಸಿದ್ದು, ಜ.10ರಿಂದ ಸರತಿ ಸಾಲಿನಲ್ಲಿ ನಿಲ್ಲಲು ದೇವಾಲಯದ ಪ್ರದೇಶದಲ್ಲಿ(ಸ್ಥಳದಲ್ಲೇ) ಮಾಡುವ ಬುಕಿಂಗ್ ಅನ್ನು ನಿರ್ಬಂಧಿಸಿದೆ. ಇದಕ್ಕಾಗಿ ಮೊದಲೇ ಆನ್‌ಲೈನ್ ಬುಕಿಂಗ್ ಮಾಡಬೇಕೆಂಬ ನಿಯಮವನ್ನು ಕಡ್ಡಾಯಗೊಳಿಸಿದೆ.
ಇದರೊಂದಿಗೆ ಮಕರಜ್ಯೋತಿ ಕಾಣಿಸುವ ದಿನ ಆನ್‌ಲೈನ್ ಬುಕಿಂಗ್‌ಗೂ ಮಿತಿ ವಿಧಿಸಲಾಗಿದ್ದು, ಜ.14ರಂದು 50,000 ಮಂದಿಗೆ ಮಾತ್ರ ದರ್ಶನಕ್ಕೆ ಟಿಕೆಟ್ ಹಾಗೂ ಜ.15ರಂದು 40,000 ಮಂದಿಗೆ ಮಾತ್ರ ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಲು ಅವಕಾಶವಿದೆ ಎಂಬುದಾಗಿಯೂ ಹೇಳಿದೆ.