ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ ಹೇಳಿದರು. ಬೆಳಗಾವಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಮೋದಿ ಆಡಳಿತದಿಂದ ದೇಶಕ್ಕೆ ಅಮೃತಕಾಲ ಕೂಡಿಬಂದಿಲ್ಲ. ಬದಲಿಗೆ ದೇಶದ ಜನರು ಅನ್ಯಾಯದ ಕಾಲ ನೋಡುವಂತಾಗಿದೆ. ಕಾಂಗ್ರೆಸ್ ಈ ಅನ್ಯಾಯದ ವಿರುದ್ಧ ಹೋರಾಡಿ ನ್ಯಾಯದ ಕಾಲವನ್ನು ಮರು ಸ್ಥಾಪನೆ ಮಾಡುವುದಾಗಿ ಹೇಳಿದರು. ಅಬ್ ಕೀ ಬಾರ್ ಎನ್ ಡಿ ಎ 400 ಪಾರೋ ಅಥವಾ 420 ಗೊತ್ತಿಲ್ಲ. ಈಗಾಗಲೇ 400 ರಿಂದ 370ಕ್ಕೆ ಬಂದಿದ್ದಾರೆ. ಚುನಾವಣೆ ವೇಳೆಗೆ ಇನ್ನು ಕೆಳಗೆ ಬರುತ್ತಾರೆ ಎಂದು ಅವರು ವ್ಯಂಗ್ಯವಾಡಿದರು.