ಬೆಳಗಾವಿ : ನಗರದ ಪ್ರೇರಣಾ ಪದವಿಪೂರ್ವ ಮಹಾವಿದ್ಯಾಲಯದ ವಿಜ್ಞಾನ ವಿಭಾಗದಲ್ಲಿ ಶೇಕಡಾ 97 ರಷ್ಟು ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇಕಡಾ 95 ರಷ್ಟು ಫಲಿತಾಂಶವನ್ನು ದಾಖಲಿಸಿದೆ. ವಿಜ್ಞಾನ ವಿಭಾಗದಲ್ಲಿ ದರ್ಶಿನಿ ಪಾಟೀಲ ಶೇಕಡಾ 96.5, ಶಿವಪ್ರಸಾದ ಗೌಡ ಶೇಕಡಾ 95.7 , ಪದ್ಮಶ್ರೀ ಸವೂರ್ ಶೇಕಡಾ 94.3 ರಷ್ಟು ಫಲಿತಾಂಶವನ್ನು ಪಡೆದು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ರುತುಜ ಹಿರೇಕರ್ ಶೇಕಡಾ 96.8, ಚಿರಾಗ್ ಕುಮಾರ ಪುರೋಹಿತ್ ಶೇಕಡಾ 95 , ಮತ್ತು ಮಹಾಂತ ಮುಚ್ಛಂಡಿಕರ ಶೇಕಡಾ 94.7 ರಷ್ಟು ಫಲಿತಾಂಶ ದಾಖಲಿಸಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ . ಕನ್ನಡ ವಿಷಯದಲ್ಲಿ ನೇತ್ರಾ ಕಾರಗಿ, ದೀಪಾ ನೀರಲಗಿ, ಲೆಕ್ಕಶಾಸ್ತ್ರ ವಿಷಯದಲ್ಲಿ ಚಿರಾಗ್ ಕುಮಾರ ಪುರೋಹಿತ ನೂರಕ್ಕೆ ನೂರರಷ್ಟು ಅಂಕ ಪಡೆದಿರುವರು.ಒಟ್ಟಾರೆಯಾಗಿ ವಿಜ್ಞಾನ ವಿಭಾಗದಲ್ಲಿ ಪ್ರಶಸ್ತಿ ಸಹಿತ ಪ್ರಥಮ ಶ್ರೇಣಿಯಲ್ಲಿ 35, ಪ್ರಥಮ ಶ್ರೇಣಿಯಲ್ಲಿ 56, ಹಾಗೂ ವಾಣಿಜ್ಯ ವಿಭಾಗದಲ್ಲಿ ಪ್ರಶಸ್ತಿ ಸಹಿತ ಪ್ರಥಮ ಶ್ರೇಣಿಯಲ್ಲಿ 26, ಪ್ರಥಮ ಶ್ರೇಣಿಯಲ್ಲಿ 25 ,ವಿದ್ಯಾರ್ಥಿಗಳು ಫಲಿತಾಂಶ ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. ಕಾಲೇಜಿನ ನಿರ್ದೇಶಕ ಗಿರೀಶ ದಂಡೆನ್ನವರ ಮತ್ತು ಅಮಿತ್ ವಾಗರಾಳಿ, ಹಾಗೂ ಪ್ರಾಚಾರ್ಯ ಕಿರಣ ಪಾಟೀಲ ಹಾಗೂ ಅಧ್ಯಾಪಕ ವೃಂದದವರು ವಿದ್ಯಾರ್ಥಿಗಳ ಈ ಸಾಧನೆಗೆ ಮೆಚ್ಚಿ ಅಭಿನಂದಿಸಿದ್ದಾರೆ.