ಬೆಳಗಾವಿ:
ಸೋನಟ್ಟಿ ಗ್ರಾಮದ ಬಳಿ ₹ 12 ಲಕ್ಷದ ಮೌಲ್ಯದ ಕಳ್ಳಬಟ್ಟಿ ಸಾರಾಯಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗುಡ್ಡಗಾಡಿನ ಸೋನಟ್ಟಿ ಗ್ರಾಮದಲ್ಲಿ ಅಪಾರ ಪ್ರಮಾಣದ ಕಳ್ಳಬಟ್ಟಿಯನ್ನು ಸಂಗ್ರಹ ಮಾಡಲಾಗಿರುವ ಖಚಿತ ಮಾಹಿತಿ ಪಡೆದ ಪೊಲೀಸರು ಡಿಸಿಪಿ ನೇತೃತ್ವದಲ್ಲಿ ಸುಮಾರು 200 ಪೊಲೀಸ್‌ ಸಿಬ್ಬಂದಿಗಳ ನೆರವಿನಿಂದ 700 ಲೀಟರ್‌ 26 ಬ್ಯಾರೇಲ್‌ ಕಳ್ಳಬಟ್ಟಿ ಹಾಗೂ 30 ಲೀಟರಿನ 17 ಬ್ಯಾರೇಲ್‌ ಸಾರಾಯಿಯನ್ನು ವಶಪಡಿಕೊಂಡಿದ್ದಾರೆ.

ಪೊಲೀಸರ ದಾಳಿಯಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನುಳಿದ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ತಲೆಮರೆಸಿಕೊಂಡವರ ಪತ್ತೆಗೆ ಬೆಳಗಾವಿ ಪೊಲೀಸರು ಜಾಲ ಬೀಸಿದ್ದಾರೆ.