ಬೆಳಗಾವಿ :
ಬೆಳಗಾವಿಯ 110ಕೆವಿ ಸುವರ್ಣ ಸೌಧ ಉಪ ಕೇಂದ್ರದಲ್ಲಿ 3 ನೇ ತ್ರೈಮಾಸಿಕ ಹಾಗೂ ಇತರೆ ಕೆಲಸಗಳನ್ನು ನಿರ್ವಹಿಸುವ ಪ್ರಯುಕ್ತ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಬೆಳಗಾವಿ ನಗರದ ವಿವಿಧ ಪ್ರದೇಶಗಳ ವಿದ್ಯುತ್ ಉಪ ಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಪ್ರದೇಶಗಳಲ್ಲಿ ಶುಕ್ರವಾರ ನವೆಂಬರ್ 24, 2023 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ರವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
ವಿದ್ಯುತ್ ನಿಲುಗಡೆಯಾಗುವ ಪ್ರದೇಶಗಳು :
ಕೆಎಚ್‌ಬಿ ಕಾಲೋನಿ, ವೃದ್ಧಾಶ್ರಮ ಪ್ರದೇಶ, ಅಲ್ಲಾರವಾಡ, ಸುವರ್ಣ ಸೌಧ ಲೈನ್ -2, ಸುವರ್ಣ ಸೌಧ ಲೈನ್ -1, ಬಸವೇಶ್ವರ ವೃತ್ತ, ಜೋಶಿಯಲ್ಲಿ ನಾರ್ವೇಕರಗಲ್ಲಿ, ಆಚಾರ್ಯಗಲ್ಲಿ, ಶಹಾಪುರ, ಗಣೇಶಪುರ ಗಲ್ಲಿ, ಪವಾರಗಲ್ಲಿ, ಬಸವನಗಲ್ಲಿ, ಸರಾಫ್ ಗಲ್ಲಿ ಬಿಚ್ಚುಗಲ್ಲಿ, ಗ್ವಿಟ್ ಗಲ್ಲಿ 1 2 3 4 5 ಕ್ರಾಸ್, ಮಾರುತಿ ನಗರ, ಹರಿಕಾಕಾ ಕಂಪೌಂಡ್, ಸುವರ್ಣಸೌಧ, ಸಾಯಿ ಕಾಲೋನಿ, ಯಡಿಯೂರಪ್ಪ ಮಾರ್ಗ, ಹಲಗಾ ರಸ್ತೆ
ಸಾರ್ವಜನಿಕರು ಸಹಕರಿಸಬೇಕು ಎಂದು ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.