ಚಿಕ್ಕೋಡಿ-

ಕೆ.ಎಲ್.ಇ. ಸಂಸ್ಥೆಯ ಕಾನೂನು ಮಹಾವಿದ್ಯಾಲಯ, ಚಿಕ್ಕೋಡಿಯ ವಿದ್ಯಾರ್ಥಿನಿಯಾದ ಕುಮಾರಿ ಪ್ರತಿಕ್ಷಾ ಮೋರೆ, ಕುಮಾರಿ ವೈಷ್ಣವಿ ಕುರಬೇಟ, ಕುಮಾರಿ ಅಂಜಲಿ ಪಾಟೀಲ, ಕುಮಾರಿ ಎಫ್. ಎಮ್. ನದಾಫ್ ಮತ್ತು ಕುಮಾರಿ ಸಾದಿಯಾ ಸಯ್ಯದ ಇವರು ಕೆ.ಎಲ್.ಇ. ಸಂಸ್ಥೆಯ ಗದಗನ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯ ಜನೇವರಿ 24ರಂದು ಆಯೋಜಿಸಿದ “ಜಲಶಕ್ತಿ ಅಭಿಯಾನ” ಒಂದು ದಿನದ ರಾಜ್ಯ ಮಟ್ಟದ ವಿದ್ಯಾರ್ಥಿ ಸೆಮಿನಾರನಲ್ಲಿ ಭಾಗವಹಿಸಿ ಪ್ರಬಂಧ ಮಂಡನೆ ಮಾಡಿರುತ್ತಾರೆ. ಈ ಸ್ಪರ್ಧೆಯಲ್ಲಿ ಕುಮಾರಿ ಪ್ರತಿಕ್ಷಾ ಮೋರೆ ಪ್ರಬಂಧ ಮಂಡನೆಯಲ್ಲಿ ತೃತೀಯ ಬಹುಮಾನ ಪಡೆದಿರುತ್ತಾರೆ. ಇವರಿಗೆ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ: ಡಿ. ಬಿ. ಸೊಲಾಪುರೆ ಮತ್ತು ಪ್ರೊ. ಕುಮಾರ ಎಲ್. ಕಾಂಬಳೆ ಯವರು ಮಾರ್ಗದರ್ಶನ ನೀಡಿರುತ್ತಾರೆ.

ಇವರ ಈ ಸಾಧನೆಗೆ ಬೆಳಗಾವಿ ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷರು, ಆಡಳಿತ ಮಂಡಳಿ , ಸ್ಥಾನಿಕ ಆಡಳಿತ ಮಂಡಳಿ, ಪ್ರಾಚಾರ್ಯರು, ಭೋದಕ ಭೋದಕೇತರ ಸಿಬ್ಬಂದಿ ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.