ಅಯೋಧ್ಯೆ :
ಅಯೋಧ್ಯೆಯ ರಾಮ ಮಂದಿರ ಪ್ರಾಣಪ್ರತಿಷ್ಠಾಪನೆಗೆ ಕೆಲವೇ ದಿನಗಳು ಬಾಕಿ ಇವೆ. ರಾಮಮಂದಿರಕ್ಕೆ ತಮ್ಮ ಕೈಲಾಗುವ ಸಹಾಯವನ್ನು ಭಕ್ತರು ಮಾಡುತ್ತಲೇ ಇದ್ದಾರೆ. ನೇಕಾರ ಭಕ್ತ ಸೀತಾಮಾತೆಗಾಗಿ ಬರೋಬ್ಬರಿ 196 ಅಡಿಗಳ ರೇಷ್ಮೆ ಸೀರೆಯನ್ನು ನೇಯ್ದಿದ್ದಾರೆ.
ಆಂಧ್ರಪ್ರದೇಶದ ಧರ್ಮಾವರಂ ನಿವಾಸಿ ಜುಜಾರು ನಾಗರಾಜು ಸೀತಾಮಾತೆಗಾಗಿ ಹಸಿರು ಬಣ್ಣದ ರೇಷ್ಮೆ ಸೀರೆ ನೇಯ್ದಿದ್ದಾರೆ. ಸೀರೆ ತುಂಬಾ ಶ್ರೀರಾಮ್ ಎಂದು ಬರೆಯಲಾಗಿದೆ. ಒಂದು ಬಾರಿಯಲ್ಲ, 32 ಸಾವಿರ ಬಾರಿ ವಿಭಿನ್ನ ಭಾಷೆಗಳಲ್ಲಿ ಶ್ರೀರಾಮ್ ಎಂದು ಬರೆದಿದ್ದಾರೆ. ರಾಮಾಯಣದ ಕೆಲ ಚಿತ್ರಗಳನ್ನು ಚಿತ್ರಿಸಿದ್ದಾರೆ.
ಈ ಬೃಹತ್ ಸೀರೆ 16 ಕೆಜಿಯಷ್ಟು ತೂಕವಿದೆ. 1.5 ಲಕ್ಷ ರೂಪಾಯಿ ಖರ್ಚು ಮಾಡಿ ಸೀರೆ ತಯಾರಿಸಿದ್ದು, ಮಾರುಕಟ್ಟೆಯಲ್ಲಿ ಸೀರೆ ಬೆಲೆ 3.5 ಲಕ್ಷ ರೂಪಾಯಿಗಳಾಗಿದೆ. ತನ್ನ ಜೀವನದ ಉಳಿತಾಯವನ್ನು ಸೀರೆ ಮೇಲೆ ಹಾಕಿ ದೈವಭಕ್ತಿ ಮೆರೆದಿದ್ದಾರೆ.
ಎರಡು ವರ್ಷದ ಹಿಂದೆ ಸೀರೆ ನೇಯಲು ನಾಗರಾಜು ಆರಂಭಿಸಿದ್ದರು. ಪ್ರತಿ ದಿನ 10 ಗಂಟೆಗಳನ್ನು ಇದಕ್ಕಾಗಿಯೇ ಮೀಸಲಿಡುತ್ತಿದ್ದರು. ದೇವಸ್ಥಾನದ ಸಮಿತಿಗೆ ಸೀರೆ ಸಲ್ಲಬೇಕು, ಟ್ರಸ್ಟ್ ಜೊತೆ ಮಾತನಾಡಿದ್ದು, ಒಪ್ಪಿಗೆ ಕೊಟ್ಟರೆ ಹೋಗುವೆ. ಇಲ್ಲವಾದರೆ ಇನ್ನೊಂದು ಸಲ ಹೋಗಿ ಅರ್ಪಣೆ ಮಾಡುವುದಾಗಿ ತಿಳಿಸಿದ್ದಾರೆ.