ಕೋಲ್ಕತಾ: ರಾಮಕೃಷ್ಣ ಮಿಷನ್‌ ಅಧ್ಯಕ್ಷ ಸ್ವಾಮಿ ಸ್ಮರಣಾ ನಂದ (95) ಮಂಗಳವಾರ ರಾತ್ರಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಅವರು ಮಂಗಳವಾರ ರಾತ್ರಿ 8.14 ಕ್ಕೆ ಮಹಾಸಮಾಧಿಯನ್ನು ತಲುಪಿದರು ಎಂದು ಮಿಷನ್ ಹೇಳಿಕೆ ತಿಳಿಸಿದೆ. ಅವರು 2017ರಲ್ಲಿ ಮಿಷನ್ 16ನೇ ಅಧ್ಯಕ್ಷರಾಗಿದ್ದರು. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸ್ಮರಣಾನಂದರನ್ನು ಮೂತ್ರನಾಳದ ಸೋಂಕಿನಿಂದಾಗಿ ಜನವರಿ 29 ರಂದು ರಾಮಕೃಷ್ಣ ಮಿಷನ್ ಸೇವಾ ಪ್ರತಿಷ್ಠಾನಕ್ಕೆ ದಾಖಲಿಸಲಾಗಿತ್ತು.