ರಾಜ್‌ಕೋಟ್: ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು, ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್‌ ಪಂದ್ಯದ 2ನೇ ದಿನದಾಟದಲ್ಲಿ ಝಾಕ್ ಕ್ರಾವ್ಲೆ ಅವರ ವಿಕೆಟ್ ಪಡೆಯುವ ಮೂಲಕ 500 ವಿಕೆಟ್‌ ಪಡೆದ ಸಾಧಕರ ಸಾಲಿಗೆ ಸೇರಿದರು.

ಆ ಮೂಲಕ ಜಾಗತಿಕವಾಗಿ ಈ ಸಾಧನೆ ಮಾಡಿದ 9ನೇ ಬೌಲರ್ ಎನಿಸಿದರು. ಭಾರತದಲ್ಲಿ ಅನಿಲ್ ಕುಂಬ್ಳೆ (619) ನಂತರ ಎರಡನೇ ಸ್ಥಾನ ಪಡೆದರು.

3ನೇ ಟೆಸ್ಟ್‌ನಲ್ಲಿ ಬೌಲಿಂಗ್ ಆರಂಭಿಸಿದ ಅಶ್ವಿನ್ 499 ವಿಕೆಟ್‌ಗಳನ್ನು ಪಡೆದಿದ್ದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳಿಧರನ್ (800) ಆಸ್ಟ್ರೇಲಿಯಾದ ಶೇನ್ ವಾರ್ನ್ (708), ಇಂಗ್ಲೆಂಡ್‌ನ ಜೆ ಆಂಡರ್‌ಸನ್ (693), ಭಾರತದ ಅನಿಲ್ ಕುಂಬ್ಳೆ (619), ಇಂಗ್ಲೆಂಡ್‌ನ ಎಸ್‌ ಬ್ರೋಡ್ (604), ಆಸ್ಟ್ರೇಲಿಯಾದ ಜಿ.ಮೆಗ್ರಾಥ್ (563) ವೆಸ್ಟ್ ಇಂಡೀಸ್‌ನ ಸಿ.ವಾಲ್ಸ್ (519) ಆಸ್ಟ್ರೇಲಿಯಾದ ನಾಥನ್ ಲಿಓನ್ (517) ನಂತರದಲ್ಲಿ ರವಿಚಂದ್ರನ್ ಅಶ್ವಿನ್ (500) ಸ್ಥಾನ ಪಡೆದರು.

37 ವರ್ಷದ ರವಿಚಂದ್ರನ್ ಅಶ್ವಿನ್ ಅವರು 2011ರಿಂದ ಇಲ್ಲಿವರೆಗೆ 98 ಟೆಸ್ಟ್‌ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ.