ಬೆಳಗಾವಿ : ಬೆಳಗಾವಿ ತಾಲೂಕು ಖನಗಾಂವ ಕೆ.ಎಚ್. ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದ್ವಿಚಕ್ರ ವಾಹನ ಸವಾರ ಸುಳೇಭಾವಿ ಗ್ರಾಮದ ವಿಠಲ ದತ್ತಾ ಲೋಕರೆ (29) ಮೃತಪಟ್ಟಿದ್ದಾನೆ. ಬೈಕಿಗೆ ಡಿಕ್ಕಿ ಹೊಡೆದ ಬಸ್ ಕೆಲ ದೂರ ಹೋಗಿ ಹೊಲದಲ್ಲಿ ಮಗುಚಿದೆ. ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬಸ್ ಬೆಳಗಾವಿಯಿಂದ ಗೋಕಾಕ ಕಡೆಗೆ ಹೊರಟಿತ್ತು. ಎದುರಿನಿಂದ ದ್ವಿಚಕ್ರ ವಾಹನ ಬರುತ್ತಿತ್ತು ಅದಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸವಾರ ಹೊಲದಲ್ಲಿ ಹೋಗಿ ಬಿದ್ದಿದ್ದಾನೆ.