ಬೆಂಗಳೂರು : ಮುರುಡೇಶ್ವರದ ನಿರ್ಮಾತೃ ದಿವಂಗತ ಆರ್.ಎನ್.ಶೆಟ್ಟಿ ಅವರ ಧರ್ಮಪತ್ನಿ ಸುಧಾ ಆರ್.ಎನ್.ಶೆಟ್ಟಿ ಇಂದು(ಏ.11) ಸಂಜೆ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಪತಿಯಂತೆ ಮಹಾದಾನಿಯಾಗಿದ್ದ ಸುಧಾ ಆರ್.ಎನ್.ಶೆಟ್ಟಿ ಸಮಾಜದ ಏಳ್ಗೆಗಾಗಿ ಸದಾಕಾಲ ಸಹಾಯ ಹಸ್ತ ಚಾಚಿದ್ದರು. ಮೃತರ ಅಂತಿಮ ಯಾತ್ರೆ ನಾಳೆ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ. ಬೆಂಗಳೂರಿನ ಸ್ವಗೃಹದಿಂದ ಹೊರಟು ಉತ್ತರಹಳ್ಳಿ ರಸ್ತೆಯ ಆರ್. ಎನ್. ಶೆಟ್ಟಿ ಇಂಜನಿಯರಿಂಗ್ ಕಾಲೇಜಿನ ಆವರಣದಲ್ಲಿ ಅಂತ್ಯಕ್ರಿಯೆಯ ವಿಧಿವಿಧಾನ ಜರುಗುವುದು.