ಯಕ್ಸಂಬಾ:
ಪಟ್ಟಣದ ಡಾ.ಅನಿಲ ಕಮತಿ ಗೆಳೆಯರ ಬಳಗ ಶಿಕ್ಷಣ ಸಂಸ್ಥೆಯಲ್ಲಿ ಡಿ.3ರಂದು ಸಾಹಿತಿ ದಿ.ಡಾ ಅನಿಲ ಕಮತಿಯವರ 11 ನೇ ಪುಣ್ಯಸ್ಥರಣೆಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿವೃತ್ತ ಲೋಕಾಯುಕ್ತ ಸಂತೋಷ ಹೆಗ್ಡೆ ಆಗಮಿಸಲಿದ್ದಾರೆ ಎಂದು ಬಳಗದ ಅಧ್ಯಕ್ಷ ನಿಖಿಲ ಕಮತಿ ತಿಳಿಸಿದ್ದಾರೆ.

ಅಂದು ಮುಂಜಾನೆ 10.30ಕ್ಕೆ ಪುಣ್ಯಸ್ಮರಣೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದ ಉದ್ಘಾಟನೆಯನ್ನು ಸಾಹಿತಿ ಡಾ.ಪಿ.ಜಿ.ಕೆಂಪನ್ನವರ ಉದ್ಘಾಟಿಸಲಿದ್ದಾರೆ. ಡಾ.ಸುಬ್ರಾವ ಎಂಟೆತ್ತಿನವರ ಇವರಿಂದ ಪ್ರಾಸ್ತಾವಿಕ ನುಡಿ ಹಾಗೂ ವಿಜಯ ದಾನವಾಡೆ ಅಧ್ಯಕ್ಷತೆ ವಹಿಸಲಿದ್ದು, ಸಾಯಂಕಾಲ 5 ಗಂಟೆಗೆ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ಜರುಲಿವೆ ಎಂದು ಹೇಳಿದರು.