ಬೆಂಗಳೂರು :
ರಾಜ್ಯದಲ್ಲಿ ಹೆಣ್ಣು ಶಿಶು ಭ್ರೂಣ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಗುರುವಾರ ಸಿಐಡಿ ತನಿಖೆಗೆ ಒಪ್ಪಿಸಿದೆ.
ದೂರವಾಣಿ ಮೂಲಕ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಪೊಲೀಸರಿಂದ ಭ್ರೂಣ ಹತ್ಯೆ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ. ಒಟ್ಟು ಇಬ್ಬರು ವೈದ್ಯರು ಸೇರಿದಂತೆ 9 ಜನರನ್ನು
ಸದ್ಯ ಬಂಧಿಸಲಾಗಿದೆ. ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಕೇಸ್ ನಲ್ಲಿ ಇಲಾಖೆ ತನಿಖೆ ಬಾಕಿ ಇರಿಸಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಪ್ರಕರಣ ಬೆಳಕಿಗೆ ಬಂದ ನಂತರ ಹಳೇ ನೋಟಿಸುವ ಮೂಲಕ ಕರ್ತವ್ಯಲೋಪ ಆರೋಪದಡಿ ಮೈಸೂರು ಟಿಹೆಚ್‌ಒ ರಾಜೇಶ್ವರಿ ಅಮಾನತು ಮಾಡಲಾಗಿದೆ. ಹಳೇ ನೋಟಿಸ್‌ ಅಂಟಿಸಿ ಆರೋಗ್ಯ ಇಲಾಖೆಗೆ ಮುಜುಗರವನ್ನುಂಟು ಮಾಡಿತ್ತು.