ರಿಯಾದ್: ಸೌದಿ ಅರೇಬಿಯಾ ಇದೇ ಮೊದಲ ಬಾರಿ ಅಧಿಕೃತವಾಗಿ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದೆ. ಸೌದಿ ಸುಂದರಿ ರೂಮಿ ಅಲ್ಕಪ್ತಾನಿ. ಇಸ್ಲಾಮಿಕ್ ದೇಶದ ಮೊದಲ ಪ್ರತಿನಿಧಿ ಯಾಗಿ ಭಾಗವಹಿಸುತ್ತಿದ್ದಾರೆ. 27 ವರ್ಷದ ರೂಪದರ್ಶಿ ರೂಮಿ ಅಲ್ಕಪ್ತಾನಿ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆ ಯಲ್ಲಿ ಭಾಗವಹಿಸುವುದಾಗಿ ಸೋಮವಾರ ಹೇಳಿದ್ದಾರೆ. ಸೌದಿ ಸಾಂಪ್ರದಾಯಿಕ ಇಸ್ಲಾಮಿಕ್ ದೇಶ ಆಗಿದ್ದು, ಈವರೆಗೂ ಸೌಂದರ್ಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ.