ಲಖನೌ: ಉತ್ತರ ಪ್ರದೇಶದ ಪಿಲಿಬಿತ್ ಕ್ಷೇತ್ರದಿಂದ ಟಿಕೆಟ್ ವಂಚಿತ ಸಂಸದ ವರುಣ್ ಗಾಂಧಿಗೆ ಕಾಂಗ್ರೆಸ್ ಸೇರುವಂತೆ ಪಕ್ಷದ ಹಿರಿಯ ಮುಖಂಡ ಅಧೀರ್ ರಂಜನ್ ಚೌಧರಿ ಆಹ್ವಾನ ನೀಡಿದ್ದಾರೆ. ವರುಣ್ ಗಾಂಧಿ ಪ್ರಬಲ ನಾಯಕ, ಗಾಂಧಿ ಕುಟುಂಬದೊಂದಿಗೆ ನಂಟು ನಿರಾಕರಿಸಿದೆ. ಕ್ಲೀನ್ ಇಮೇಜ್ ಹೊಂದಿರುವ ವರ್ಚಸ್ವಿ ನಾಯಕ ವರುಣ್ ಕಾಂಗ್ರೆಸ್‌ಗೆ ಬಂದರೆ ಸ್ವಾಗತಿಸುತ್ತೇವೆ. ಪಕ್ಷ ಸೂಕ್ತ ಸ್ಥಾನಮಾನ ನೀಡಿ ಗೌರವಿಸಲಿದೆ ಎಂದು ಚೌಧರಿ ಹೇಳಿದ್ದಾರೆ.