ಹೊಸದಿಲ್ಲಿ: ”ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ ಎಂದಿಗೂ ಭಾರತದ ಅವಿಭಾಜ್ಯ ಅಂಗ. ಅಲ್ಲಿರುವ ಹಿಂದೂ ಹಾಗೂ ಮುಸ್ಲಿಮರು ಎಂದೆಂದಿಗೂ ಭಾರತೀಯರು. ನಮ್ಮ ಭೂಮಿಯನ್ನು ಮರಳಿ ಪಡೆಯುವುದೇ ದೇಶದ ಪ್ರತಿಯೊಬ್ಬ ಜನರ ಹೆಗ್ಗುರಿಯಾಗಿದೆ,” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದ್ದಾರೆ.

ಮಾಧ್ಯಮ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಕುರಿತು ಪ್ರತಿಕ್ರಿಯೆ ನೀಡಿರುವ ಅಮಿತ್ ಶಾ, ”ಪಿಒಕೆ ಎಂದೆಂದೂ ಭಾರತದ ನೆಲ. ಅದನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ನಮ್ಮ ಭೂಮಿಯನ್ನು ಪಾಕಿಸ್ತಾನ ಆಕ್ರಮವಾಗಿ ಅತಿಕ್ರಮಿಸಿದೆ. ಮರಳಿ ಪಡೆಯುವುದು ಭಾರತೀಯರ ಕನಸಾಗಿದೆ. ಅದೇ ನಮ್ಮ ಮುಂದಿನ ಗುರಿಯಾಗಿದೆ,” ಎಂದು ಹೇಳಿದರು.