ಬೆಳಗಾವಿ: ಶಹಾಪುರದ ಶ್ರೀ ದಾನಮ್ಮದೇವಿ ಮೂರ್ತಿ ಪ್ರತಿಷ್ಠಾಪನೆಯ 39 ನೇ ವಾರ್ಷಿಕೋತ್ಸವ ಪ್ರಯುಕ್ತ ಫೆ.21 ರಿಂದ ಫೆ.23 ವರೆಗೆ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಫೆ.21 ರಂದು ಬೆಳಗ್ಗೆ 10.15ಕ್ಕೆ ಶ್ರೀ ಜಗಜ್ಯೋತಿ ಬಸವೇಶ್ವರ ಕಲ್ಯಾಣ ಮಂದಿರ ಟ್ರಸ್ಟ್ ಮತ್ತು ಕೆಎಲ್ಇ ಆಸ್ಪತ್ರೆ ಸಮಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜೆ.ಎ. ನಾಗಲೀಕರ ಉದ್ಘಾಟಿಸಲಿದ್ದಾರೆ. ಫೆ.22 ರಂದು ಸಂಜೆ 5.30 ಗಂಟೆಗೆ 39ನೇ ವಾರ್ಷಿಕೋತ್ಸವ ಸಮಾರಂಭ ಮತ್ತು ವಿವಿದ ಸಾಮಗ್ರಿಗಳ ವಿತರಣೆ ನಡೆಯಲಿದೆ. ನೆಹರು ನಗರ ಮಹೇಶ್ವರಿ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಂದ ವಚನ ಪ್ರಾರ್ಥನೆ ಮಾಡಲಿದ್ದಾರೆ. ನಾಗನೂರು ರುದ್ರಾಕ್ಷಿಮಠದ ಶ್ರೀ ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಂಸದೆ ಮಂಗಳಾ ಅಂಗಡಿ ಉಪಸ್ಥಿತರಿರುವರು. ಲಿಂಗರಾಜ ಬಸವರಾಜ ಅಪ್ಪ ಹಾಗೂ ಬಸವರಾಜ ಉಮರಾಣಿ ಅವರನ್ನು ಸನ್ಮಾನಿಸಲಾಗುವುದು. ಅಕ್ಕನ ಬಳಗದ ಶರಣೆಯರು ಮಂಗಲ ಕಾರ್ಯ ನಡೆಸಿಕೊಡಲಿದ್ದಾರೆ.
ಫೆ.23 ರಂದು ಬೆಳಿಗ್ಗೆ 9 ಗಂಟೆಗೆ ಜಂಗಮ ದಂಪತಿಗಳ ಪೂಜೆ, ಮಧ್ಯಾಹ್ನ 12 ರಿಂದ 2.30 ಗಂಟೆವರೆಗೆ ಮಹಾಪ್ರಸಾದ ನಡೆಯಲಿದೆ. ಸಂಜೆ 5.30 ಗಂಟೆಗೆ ಪಲ್ಲಕ್ಕಿ ಉತ್ಸವ ನಡೆಯಲಿದೆ. ಉತ್ಸವಕ್ಕೆ ಕಸಾಪ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ ಚಾಲನೆ ನೀಡಲಿದ್ದಾರೆ ಎಂದು ಶ್ರೀ ದಾನಮ್ಮಾದೇವಿ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಬೆಂಬಳಗಿ ಹಾಗೂ ಕಾರ್ಯದರ್ಶಿ ಸಿ. ಎಂ.ಕಿತ್ತೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.