ಬೆಳಗಾವಿ : ಬೆಳಗಾವಿಯ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಬುಧವಾರ ನಗರದ ಹಿಂದವಾಡಿ ಐಎಂಇಆರ್ ಸಭಾಗೃಹದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಬೆಳಗಾವಿಯ ರಂಗಕರ್ಮಿ, ಕಲಾವಿದೆ ಶಾಂತಾ ಆಚಾರ್ಯ ಅವರಿಗೆ ಸುಮನ ಗುರುನಾಥ ಹುದಲಿ ದತ್ತಿನಿಧಿ ಪ್ರಶಸ್ತಿ ನೀಡಿ ಅಭಿನಂದಿಸಿ ಗೌರವಿಸಲಾಯಿತು. ಖ್ಯಾತ ನ್ಯಾಯವಾದಿ ಎಸ್.ಎಂ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.
ಶಾಂತಾ ಆಚಾರ್ಯ ಅವರು ಕಳೆದ ಮೂರು ದಶಕಗಳಿಂದ ನಾಟಕ, ಸಿನಿಮಾ, ಯಕ್ಷಗಾನ, ರಂಗಭೂಮಿ ಸೇರಿದಂತೆ ವಿವಿಧ ಕಲಾ ಪ್ರಕಾರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಗುರುತಿಸಿಕೊಂಡಿದ್ದಾರೆ. ಜೊತೆಗೆ “ಪ್ರಯತ್ನ” ಎಂಬ ಸಾಮಾಜಿಕ ಸಂಘಟನೆ ಮೂಲಕ ಸಮಾಜಕ್ಕೆ ನೆರವಿನ ಹಸ್ತ ನೀಡುತ್ತಿದ್ದಾರೆ.