ಅಯೋಧ್ಯೆ :
ಅಯೋಧ್ಯೆ ರಾಮ ಮಂದಿರದಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಶ್ರೀರಾಮ ಜ್ಯೋತಿ ಬೆಳಗಿ ದೀಪಾವಳಿ ಆಚರಿಸಲು ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಶ್ರೀ ರಾಮನ ಕುರಿತ ಭಜನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವಂತೆ ಮನವಿ ಮಾಡಿದ್ದಾರೆ.

ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಸಾಕಷ್ಟು ಅನುಭವಿಗಳು ಮತ್ತು ಉದಯೋನ್ಮುಖ ಕಲಾವಿದರು ಭಜನೆಗಳನ್ನು ರಚಿಸಿ ಹಾಡುವವರಿದ್ದಾರೆ. ಶ್ರೀರಾಮನ ಕುರಿತು ಅಥವಾ ಅಯೋಧ್ಯೆ ಕುರಿತು ಭಜನೆಗಳನ್ನು ರಚಿಸಿದ್ದರೆ ಅವುಗಳನ್ನು ಹಾಡಿದ್ದರೆ ಅಥವಾ ಅದಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯ ಕೃತಿಗಳನ್ನು ರಚಿಸಿದ್ದರೆ ಅವುಗಳನ್ನು # ShriRamBhajan ಹ್ಯಾಶ್ ಟ್ಯಾಗ್ ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಿ, ಆಗ ಅದು ಎಲ್ಲರಿಗೂ ಸಿಗುತ್ತವೆ. ಭಕ್ತಿಯ ಧಾರೆ ಹರಿಸುತ್ತವೆ ಎಂದು ಹೇಳಿದ್ದಾರೆ. ಅದನ್ನು ಭಕ್ತಿ ಹಾಗೂ ಭಾವನೆಯಾಗಿ ಹರಿಸೋಣ. ಅಯೋಧ್ಯೆ ಕುರಿತು ಭಜನೆ ರಚನೆಯಾಗಿವೆ. ಎಲ್ಲವೂ ಒಂದೇ ಕಡೆ ಸಿಗುವಂತಾಗಲಿ ಎಂದು ಅವರು ತಿಳಿಸಿದ್ದಾರೆ.