ಯಲ್ಲಾಪುರ: ಇಲ್ಲಿನ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ವಿರುದ್ಧ ಪೇಟಿಎಂ ಪೋಸ್ಟರ್ ಮೂಲಕ ಅಭಿಯಾನ ನಡೆಸಲಾಗುತ್ತಿರುವುದು ಇದೀಗ ಬೆಳಕಿಗೆ ಬಂದಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಆಗ ಮುಖ್ಯಮಂತ್ರಿ ಆಗಿದ್ದ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವರ ವಿರುದ್ದ ಕಾಂಗ್ರೆಸ್ಸಿಗರು ಪೇಸಿಎಂ ಅಭಿಯಾನ ನಡೆಸಿದ್ದರು. ಇದೀಗ ಶಿರಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದ ಬಳಿ ಪೇಟಿಎಂ ಪೋಸ್ಟರ್ ಅಂಟಿಸುವ ಮೂಲಕ ಶಿವರಾಮ್ ಹೆಬ್ಬಾರ್ ಅವರನ್ನು ಗುರಿಯಾಗಿರಿಸಿಕೊಂಡು ನಮ್ಮ ಪಕ್ಷ ನಮ್ಮ ಹಕ್ಕು ಬಿಜೆಪಿ ಕಸ ಕಾಂಗ್ರೆಸಿಗೆ ವಿಷ, ಭ್ರಷ್ಟರಿಗೆ ಜಾಗವಿಲ್ಲ ಎಂಬ ಬರಹ ಬರೆಯಲಾಗಿದೆ.
ಡೀಲ್ ನಿಮ್ದು ಕಮಿಷನ್ ನಮ್ದು ಅಹಾರದ ಕಿಟ್ ಗೆ
ಪೇಟಿಎಂ ಮಾಡಿ ಎಂದು ಪೋಸ್ಟರ್ ಕ್ಯೂಆರ್ ಕೋಡ್ ನಲ್ಲಿ ಪೋಸ್ಟರ್ ಅಂಟಿಸಲಾಗಿದೆ. ಬಿಜೆಪಿಯಿಂದ ಬಂಡೆದ್ದಿರುವ ಶಾಸಕ ಶಿವರಾಮ ಹೆಬ್ಬಾರ ಕಾಂಗ್ರೆಸ್ ಸೇರ್ಪಡೆ ಆಗಬಹುದು ಎಂಬ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್ ಕಾರ್ಯಕರ್ತರೇ ಈ ಪೋಸ್ಟರ್ ಅಂಟಿಸಿರುವ ಅನುಮಾನ ವ್ಯಕ್ತವಾಗಿದೆ.