ಬೆಳಗಾವಿ : ನಗರದ ಶಿವಗಿರಿ ಕೋ ಆಪ್ ಕ್ರೆಡಿಟ್ ಸೊಸೈಟಿಯ 2024 -2029 ರ ಸಾಲಿನ ಅವಧಿಗೆ ನಡೆದ ನಿರ್ದೇಶಕ ಮಂಡಳಿಯ ಚುನಾವಣೆಯಲ್ಲಿ ಎಲ್ಲಾ ನಿರ್ದೇಶಕರು ಅವಿರೋಧ ಆಯ್ಕೆಯಾದರು. ಜೊತೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸುಜನ್ ಕುಮಾರ್ ಎಮ್. ಹಾಗೂ ಉಪಾಧ್ಯಕ್ಷರಾಗಿ ಸುನಿಲ್ ಆರ್. ಪೂಜಾರಿ ಅವರು ಸತತ ನಾಲ್ಕನೇ ಬಾರಿ ಅವಿರೋಧವಾಗಿ ಆಯ್ಕೆಯಾದರು.