
ಕಾವೂರ್ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ.)ಬಜಪೆ ಯೋಜನಾ ಕಚೇರಿ ವ್ಯಾಪ್ತಿಯ ಕಾವೂರ್ ವಲಯದ ಕೃಷ್ಣನಗರದಲ್ಲಿ ಜ್ಞಾನವಿಕಾಸ ವತಿಯಿಂದ ಕೇಂದ್ರದ ಸದಸ್ಯರಿಗೆ ಸ್ವ ಉದ್ಯೋಗ ಹಾಗೂ ಮಹಿಳೆಯರು ನಿತ್ಯ ಉಪಯೋಗಿ ತಯಾರಿಯ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಶ್ರೀ ಜಾಗೃತಿ ವೇದಿಕೆಯ ಸಮನ್ವಧಿಕಾರಿಯಾದ ಶಂಶದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಹಿಳೆಯರು ಸಣ್ಣ ಪುಟ್ಟ ಸಹ ಉದ್ಯೋಗ ಕೈಗೊಂಡಲ್ಲಿ ನಾವು ಮೂಲೆಗುಂಪಾಗದೆ ನಾಲ್ಕು ಜನ ನಮ್ಮನ್ನು ಗುರುತಿಸಲು ಸಾಧ್ಯ ಹಾಗೂ ಮಹಿಳೆಯರು ಕಷ್ಟ ಬಂದಾಗ ಮುಂದೆ ಬರಬೇಕು. ಜೊತೆಗೆ ಯೋಜನೆಯಲ್ಲಿ ಆರ್ಥಿಕವಾಗಿ ಹತ್ತು ಹಲವರು ಕಾರ್ಯಕ್ರಮಗಳಿದ್ದು ಇದನ್ನು ನಾವು ನಮ್ಮ ಜೀವನಕ್ಕಾಗಿ ಉಪಯೋಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಷ್ಪಲತಾ ವಹಿಸಿದ್ದರು. ಕೇಂದ್ರ ಒಕ್ಕೂಟದ ಅಧ್ಯಕ್ಷ ರಾಜೇಶ್ ಜುವೆಲ್ಲರಿ ತಯಾರಿ ಪ್ರೇರಕರಾದ ಅಂಜನಾ, ಮಹಿಳೆಯರಿಗೆ ಮುತ್ತಿನ ಹಾರ ಬಳೆ ಹಾಗೂ ಕಿವಿ ಓಲೆ ತಯಾರಿ ಮಾಹಿತಿ ನೀಡಿದರು. ಸಮನ್ವಯಧಿಕಾರಿ ಶೋಭಾ ಪ್ರಾಸ್ತಾವಿಕ ಮಾತನಾಡಿದರು. ಸೇವಾ ಪ್ರತಿನಿಧಿ ಸುನಿತಾ ನಿರೂಪಣೆಗೈದರು. ಸಂಯೋಜಕಿ ಜಯಲಕ್ಷ್ಮಿ ಸ್ವಾಗತಿಸಿದರು.