ಬೆಳಗಾವಿ : ಯಂತ್ರಾಂಶ ಮತ್ತು ತಂತ್ರಾಂಶ ಒಂದಕ್ಕೊಂದು ನಿಕಟ ಸಂಬಂಧವಿದೆ. ಅವೆರಡೂ ದೇಹ ಆತ್ಮವಿದ್ದಂತೆ ಎಂದು ಪೀಪಲ್ ಟ್ರಿ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಚೇತನ್ ಗಂಗಾಯಿ ಅಭಿಪ್ರಾಯಪಟ್ಟರು.

ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಐಕ್ಯೂಎಸಿ ಉಪಕ್ರಮದಲ್ಲಿ ಗಣಕಯಂತ್ರ ವಿಭಾಗದಿಂದ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ
ಹಾರ್ಡ್ವೇರ್ ಹಬ್ ದ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.

ಜಾಗತಿಕವಾಗಿ ತಂತ್ರಾಂಶದಂತೆ ಯಂತ್ರಾಂಶಕ್ಕೆ ಬಹುಬೇಡಿಕೆ ಇದೆ. ಹಾಗಾಗಿ ತಂತ್ರಾಂಶದಷ್ಟೇ ಯಂತ್ರಾಂಶದ ಜ್ಞಾನ ಮುಖ್ಯ. ಯಂತ್ರಾಂಶವು ಗಣಕಯಂತ್ರದಲ್ಲಿ ಬಹಳ ಪ್ರಧಾನವಾದುದು. ಯಂತ್ರಾಂಶದ ಕಡೆಗೆ ವಿದ್ಯಾರ್ಥಿಗಳು ಗಮನ ಹರಿಸಬೇಕು. ಪ್ರತಿ ಕಾಲಘಟ್ಟದಲ್ಲಿ ತಂತ್ರಾಂಶವು ಬದಲಾವಣೆಯಾಗುತ್ತಿರುತ್ತದೆ. ಅದರ ಜೊತೆಗೆ ಯಂತ್ರಾಂಶವು ಬದಲಾಗುತ್ತದೆ. ಈ ನಾವೀನ್ಯತೆಗೆ ನಾವು ತೆರೆದುಕೊಳ್ಳಬೇಕು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಎಂ.ಜಿ. ಹೆಗಡೆ ಮಾತನಾಡಿ, ವಿದ್ಯಾರ್ಥಿಗಳು ತಂತ್ರಾಂಶ ಮತ್ತು ಯಂತ್ರಾಂಶ ಎರಡರ ಕುರಿತು ಜ್ಞಾನ ಪಡೆದುಕೊಳ್ಳಬೇಕು. ಇದರಿಂದ ನಮಗೆ ಮಾರುಕಟ್ಟೆಯಲ್ಲಿ ಉದ್ಯೋಗದ ಅವಕಾಶ ಹೆಚ್ಚಿರುತ್ತದೆ. ಜೊತೆಗೆ ನಮ್ಮ ಗಣಕಯಂತ್ರಗಳ ದುರಸ್ತಿಯನ್ನು ನಾವೇ ಮಾಡಿಕೊಳ್ಳುವ ಕನಿಷ್ಠ ಯಂತ್ರಾಂಶದ ಜ್ಞಾನವನ್ನಾದರೂ ನಾವು ಪಡೆದುಕೊಳ್ಳುವುದು ಅವಶ್ಯಕತೆ ಇದೆ. ತಂತ್ರಾಂಶ ಮತ್ತು ಯಂತ್ರಾಂಶಗಳೆರಡರಕ್ಕೂ ಬೇಡಿಕೆ ಇದೆ ಎಂಬುದನ್ನು ವಿದ್ಯಾರ್ಥಿಗಳು ಅರಿತಿರಬೇಕು. ಯಂತ್ರಾಂಶದ ಅರಿವು ಪ್ರತಿಯೊಬ್ಬ ವಿದ್ಯಾರ್ಥಿಗೆ ಇರಬೇಕು ಎಂದರು.

ವಿದ್ಯಾರ್ಥಿಗಳು ಗಣಕ ವಿಜ್ಞಾನ ವಿಭಾಗದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಜ್ಯೂಹಾ ದೇವಲಾಪುರ, ಈರಣ್ಣ ಬೆಟಗೇರಿ, ರಾಧಿಕಾ ನಾಯ್ಕ, ತನ್ವೀರ್ ಶಹಾನಾ ಅಲ್ಮಾಸ್ ಶೇಖ್, ಅವರನ್ನು ಅಭಿನಂದಿಸಲಾಯಿತು. ಶೈಕ್ಷಣಿಕ ಸಾಧನೆ ಮಾಡಿದ ಡಾ. ನಮಿತಾ ಪೋತರಾಜ ಹಾಗೂ ಆನಂದ ಮಾಲದಿನ್ನಿ ಅವರನ್ನು ಸನ್ಮಾನಿಸಲಾಯಿತು.

ಲಾವಣ್ಯ ಎಂ. ಡಿ. ಪ್ರಾರ್ಥಿಸಿದರು. ಮಧು ದೊಡ್ಡಮನಿ ಸ್ವಾಗತಿಸಿದರು, ಸೃಷ್ಟಿ ಪಾಟೀಲ ಪರಿಚಯಿಸಿದರು. ಸೃಷ್ಟಿ ಬಡಿಗೇರ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವಿದ್ಯಾರ್ಥಿನಿ ಆಯಿಷಾ ಅತ್ತರ ವಂದಿಸಿದರು, ಸ್ವಾತಿ ಕನ್ನಟ್ಟಿ ನಿರೂಪಿಸಿದರು. ಗಣಕಯಂತ್ರ ವಿಭಾಗದ ಉಪನ್ಯಾಸಕರಾದ ಡಾ. ಜ್ಯೋತಿ ಪಾಟೀಲ, ಡಾ. ನಮಿತಾ ಪೋತರಾಜ, ಅನುಷಾ ಡಿ.ಎಸ್. ಅರ್ಚನಾ ಮಗದುಮ್, ಪ್ರವೀಣ ನಾಯ್ಕ, ಆನಂದ ಮಾಲದಿನ್ನಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.