ಬೆಳಗಾವಿ:
ಮನುಷ್ಯತ್ವದ ಧರ್ಮ ಉಳಿಸಿದ ಲಿಂಗಾಯತ ಮಠಮಾನ್ಯಗಳ ಕಾಯಕ ಹೇಳುವಲ್ಲಿ
ಲಿಂಗಾಯತ ರಾಜಕಾರಣಿಗಳು ಸೋಲುತ್ತಿದ್ದಾರೆ ಎಂದು ಬೈಲೂರು ನಿಷ್ಕಲ ಮಂಟಪದ
ಶ್ರೀ ನಿಜಗುಣಾನಂದ ಸ್ವಾಮೀಜಿ ಹೇಳಿದರು.

ಲಿಂಗೈಕ್ಯ ಡಾ.ಶಿವಬಸವ ಮಹಾಸ್ವಾಮಿಗಳವರ 134 ನೇ ಜಯಂತಿ ಮಹೋತ್ಸವ ಮತ್ತು ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಆಶೀರ್ವಚನ
ನೀಡಿದರು.

ಕರ್ನಾಟಕವನ್ನು ಎಂದರೆ ಸಂಕ್ಷಿಪ್ತ ಭಾರತ ಎಂದು ಬಣ್ಣಿಸಿದ ಅವರು ಕರ್ನಾಟಕದ
ಲಿಂಗಾಯತರು ಮಠಾಧೀಶರು ಸ್ವಾಮಿಗಳು ಭಿನ್ನವಾಗಿದ್ದಾರೆ. ಬಸವಣ್ಣ ಮನುಷ್ಯತ್ವದ ಬಗ್ಗೆ
ಮಾತನಾಡಿದರು. ಅದನ್ನು ಜಾರಿಗೆ ತಂದರು. ಅವರ ಪರಂಪರೆಯಲ್ಲಿ ಬಂದ ಸ್ವಾಮಿಗಳು ಮಠಾಧೀಶರು
ಅದನ್ನೇ ಅನುಸರಿಸಿದರು, ಸಾವಿರ ವರ್ಷಗಳ ಹಿಂದೆ ಪರದೇಶದಿಂದ ಇಲ್ಲಿಗೆ ಬಂದ ಸೂಫಿ
ಸಂತಾನೋ ಒಬ್ಬ ಬಸವಣ್ಣನವರ ತತ್ವಗಳಿಗೆ ಮಾರುಹೋಗಿ ಲಿಂಗಾಯತನಾಗಿ ಪರಿವರ್ತಿತನಾದ ತತ್ವ
ನಮ್ಮದು, ಉಳಿದ ರಾಜ್ಯಗಳಲ್ಲಿ ಕಾಲ್ಪನಿಕ ದೇವರ ಬಗ್ಗೆ ಮಾತನಾಡಿದರು.

ಕರ್ನಾಟಕದಲ್ಲಿ
ಮಾತ್ರ ಲಿಂಗದ ಬದಲು ಜಂಗಮ ನೋಡಿ ಮನುಷ್ಯ ನನ್ನ ದೇವರಾಗಿ ನೋಡಿದ ಧರ್ಮ ಅದನ್ನು ಮರೆತು
ಕೆಲವು ಶಿಕ್ಷಣ ಸಂಸ್ಥೆಗಳು ತಾತ್ವಿಕ ದೃಷ್ಟಿಯಲ್ಲಿ ಸೋತು ವೈದಿಕ ಅಕ್ಟೋಪಸ್ ಕೈಗೆ
ಸಿಕ್ಕಿಹಾಕಿಕೊಂಡದ್ದು ದುರ್ದೈವ ಎಂದರು.
ಸಮುದಾಯದಿಂದ ರಾಷ್ಟ್ರವೇ ಹೊರತು ವೈದಿಕ ಹೋಮ ಹವನ ಮಂದಿರದಿಂದಲ್ಲ ಎಂದ ಅವರು
ರಾಷ್ಟ್ರಧರ್ಮ ಲಿಂಗಾಯತ ಧರ್ಮ ಇದನ್ನು ಅರಿತುಕೊಂಡು ಎಚ್ಚೆತ್ತುಕೊಳ್ಳದಿದ್ದರೆ
ಲಿಂಗಾಯತ ಧರ್ಮ ಮತ್ತು ಪರಂಪರೆ ಉಳಿಯಲಾರದು ಇದರ ಕುರಿತು ಗಂಭೀರ ಚಿಂತನೆಯನ್ನು
ಕೈಗೊಳ್ಳಬೇಕು. ಬ್ರಾಹ್ಮಣರಿಂದ ಹಿಡಿದು ದಲಿತರವರಿಗೆ ಅಂದ ವಸ್ತ್ರ ವಿದ್ಯೆ ಸಂಸ್ಕಾರ
ನೀಡಿ ಬೆಳೆಸಿದ ಲಿಂಗಾಯತ ಮಠಗಳು ಉಳಿಯಬೇಕು ಶಿಕ್ಷಣ ಮತ್ತು ದಾಸೋಹದೊಂದಿಗೆ ತತ್ವವು
ಉಳಿಯಬೇಕು. ಜಂಗಮವೇ ದೇವರು ಇದನ್ನು ಅರಿತುಕೊಳ್ಳಬೇಕು, ನಿಯಮಿತವಾಗಿ
ಆಚರಿಸಲಾಗುತ್ತಿರುವ ನಮಾಜ್ ನಿಂತ್ರೆ ಇಸ್ಲಾಂ ಉಳಿಯದು ಪ್ರಾರ್ಥನೆ ನಿಂತ್ರೆ ಕ್ರೈಸ್ತ
ಧರ್ಮ ಉಳಿಯುವುದು ಆಚರಣೆಗಳು ನಿಂತ್ರೆ ವೈದಿಕ ಅದೇ ರೀತಿ ಲಿಂಗಾಯತರು ಲಿಂಗಪೂಜೆ
ನಿಲ್ಲಿಸಿದರೆ ಈ ಹಿನ್ನೆಲೆಯಲ್ಲಿ ತಾತ್ವಿಕವಾಗಿ ಗಟ್ಟಿಯಾಗದಿದ್ರೆ ಲಿಂಗಾಯತ ಧರ್ಮ
ಉಳಿಯದು. ಈ ನಿಟ್ಟಿನಲ್ಲಿ ಎಲ್ಲರೂ ಗಂಭೀರವಾಗಿ ಚಿಂತನೆ ಮಾಡಿ ದಾಸೋಹ ಲಿಂಗ ಪೂಜೆ
ಲಿಂಗಾಯತ ತತ್ವಗಳು ಉಳಿಯುವಂತೆ ಮಾಡಬೇಕು ಬೆಳೆಸಬೇಕು ಎಂದವರು ಹೇಳಿದರು.

ಸಾನ್ನಿಧ್ಯವನ್ನು ವಹಿಸಿದ್ದ ಗದುಗಿನ ತೋಟದಾರ್ಯ ಮಠದ ಜಗದ್ಗುರು ಡಾ.ತೋಂಟದ
ಸಿದ್ದರಾಮ ಸ್ವಾಮೀಜಿ ಆಶೀರ್ವಚನ ನೀಡಿ, ಬಳಸುವ ಕೈಗಳು ಪ್ರಾಮಾಣಿಕವಾಗಿದ್ದರೆ
ನೀಡುವ ಕೈಗಳು ಬೇಕಾದಷ್ಟು ಎನ್ನುವಂತೆ ಲಿಂಗೈಕ್ಯ ಶಿವಬಸವ ಮಹಾಸ್ವಾಮಿಗಳು ತಮಗಾಗಿ
ಏನನ್ನು ಬಯಸಿದವರಲ್ಲ ಭಕ್ತರು ಪ್ರಸಾದಕ್ಕಂದು ಕರೆದರೆ ನಾನೊಬ್ಬನೇ ಅಲ್ಲ ನನ್ನೊಂದಿಗೆ
1೦೦ ಮಕ್ಕಳಿರುತ್ತವೆ ಎಂದು ತಮ್ಮೊಂದಿಗೆ ಮಕ್ಕಳನ್ನು ಕರೆದುಕೊಂಡು ಪ್ರಸಾದಕ್ಕೆ
ಹೊರಡಲು ಸಿದ್ದರಾಗುತ್ತಿದ್ದರು. ಅಂತಹ ಮಾತೃ ಹೃದಯದ ಶ್ರೀಗಳು ಅವರಾಗಿದ್ದರು. ನಾಡಿನ ಮಠಾಧೀಶರಿಗೆ ಮಾದರಿಯನ್ನುವಂತೆ ಬದುಕಿದವರು ಎಂದವರು ನುಡಿದರು.

ರುದ್ರಾಕ್ಷಿಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಸ್ವಾಮಿಗಳ ಕಾರ್ಯವನ್ನು ಅತ್ಯಂತ ಕಡಿಮೆ ಸಮಯದಲ್ಲಿ ನೂತನ ಕಾಲೇಜಿನ
ಕಟ್ಟಡ ಸೇರಿದಂತೆ ಆಧುನಿಕ ಪರಿಕರಗಳೊಂದಿಗೆ ಶಿಕ್ಷಣ ಸಂಸ್ಥೆಯನ್ನು ಬೆಳೆಸುತ್ತಿರುವ
ಕಾರ್ಯ ಅತ್ಯುತ್ತಮವಾಗಿದೆ. ಶಿಕ್ಷಣ ಸಂಸ್ಥೆಯ ಸಿಬ್ಬಂದಿಯ ಕಾರ್ಯ
ಬಹಳ ಚೆನ್ನಾಗಿ ನಡೆದಿದೆ ಎಂದರು.

ಶ್ರೀ ಸಿದ್ದರಾಮೇಶ್ವರ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಬಾಳೇಕುಂದ್ರಿ
ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ವಿಭಾಗದ ನೂತನ ಕಟ್ಟಡದ ಉದ್ಘಾಟನೆ
ನೆರವೇರಿಸಲಾಯಿತು.

ನೇತೃತ್ವವನ್ನು ವಹಿಸಿದ್ದ ಕಲಬುರ್ಗಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮೀಜಿ
ಆಶೀರ್ವಚನ ನೀಡಿದರು. ಸಮ್ಮುಖದಲ್ಲಿ ಕಲಬುರ್ಗಿ ಗದ್ದುಗೆ ಮಠದ ಶ್ರೀ ಚರಲಿಂಗ
ಸ್ವಾಮೀಜಿ ಉಪಸ್ಥಿತರಿದ್ದರು.
ಶ್ರೀ ಮಠದಿಂದ ಕೊಡ ಮಾಡಲಾಗುವ “ಸೇವಾರತ್ನ ಪ್ರಶಸ್ತಿ” ಯನ್ನು ಗದುಗಿನ ತೋಂಟದಾರ್ಯ
ವಿದ್ಯಾಪೀಠದ ಆಡಳಿತಾಧಿಕಾರಿ ಸಿದ್ದಲಿಂಗ ಪಟ್ಟಣಶೆಟ್ಟಿ, ಗೋಕಾಕದ ಸಿ ಕೆ
ನಾವಲಗಿ, ಬೈಲಹೊಂಗಲದ ಮುರಿಗೆಪ್ಪ ಜಿಗಿಜಿನ್ನಿ, ಘಟಪ್ರಭಾದ ಜಿ.ಎ.ಪತ್ತಾರ
, ಗದುಗಿನ ಅನರ್ಘ್ಯ ಸಂಗೀತ ಪಾಠಶಾಲೆಯ ವನಮಾಲಾ ಮಾನಶೆಟ್ಟಿ, ಬೆಳಗಾವಿಯ
ಸಿ.ಎಂ.ಬೂದಿಹಾಳ ಇವರಿಗೆ ನೀಡಿ ಗೌರವಿಸಲಾಯಿತು.

ಡಾ. ಶಿವಬಸವ ಸ್ವಾಮೀಜಿ ಅವರು ಆಲ್ಬಮ್ , ಡಾ. ಎನ್.ಜಿ. ಮಹದೇವಪ್ಪ
ವಿರಚಿತ “ಲಿಂಗಾಯಿತ ಧರ್ಮ ಮತ್ತು ದರ್ಶನ” , ಮುದುಗಲ್ಲ ಸ್ವಾಮೀಜಿ ವಿರಚಿತ,”ಬದುಕು
ಮೂರಕ್ಷರದ ಗಂಟು” ಗ್ರಂಥಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ಪ್ರೊ.ಎ.ಕೆ.ಪಾಟೀಲ ಸ್ವಾಗತಿಸಿದರು, ಮಂಜುನಾಥ ಶರಣಪ್ಪನವರ ಮತ್ತು ರಾಜಶೇಖರ ಪಾಟೀಲ
ನಿರೂಪಿಸಿದರು, ಬೆಳಗಾವಿ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ , ಕಾರಂಜಿ
ಮಠದ ಕಿರಿಯ ಸ್ವಾಮೀಜಿ ಶಿವಯೋಗಿ ದೇವರು, ಶರಣೆ ಕುಮುದಿನಿತಾಯಿ ಮತ್ತು ಶರಣಿ
ವಾಗ್ದೇವಿತಾಯಿ, ನಾಡಿನ ವಿವಿಧ ಮಠಗಳ ಮಠಾಧೀಶರು,ಸಂಸ್ಥೆಯ ಕಾರ್ಯದರ್ಶಿ
ಕೆ.ಬಿ.ಪಾಟೀಲ, ಡಾ.ಎಫ್.ವಿ.ಮಾನ್ವಿ, ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್
ಬಯ್ಯಾಪುರ, ಬಸವರಾಜ ರೊಟ್ಟಿ,ಅಶೋಕ ಮಳಗಲಿ,ಮಾಜಿ ದೆಹಲಿ ಪ್ರತಿನಿಧಿ ಶಂಕರಗೌಡ
ಪಾಟೀಲ್, ಕೆ.ಬಿ.ಹಿರೇಮಠ, ಸಿದ್ರಾಮ ರೆಡ್ಡಿ, ಬಿ.ಆರ್.ಪಟಗುಂದಿ, ಉಪಸ್ಥಿತರಿದ್ದರು.