ಬೆಂಗಳೂರು:
ಕೆಜಿಎಫ್–2 ಬಳಿಕ ತಾವು ನಟಿಸುತ್ತಿರುವ ಸಿನಿಮಾದ ಟೈಟಲ್ ಅನ್ನು ರಾಕಿಂಗ್ ಸ್ಟಾರ್ ಯಶ್ ಬಹಿರಂಗಪಡಿಸಿದ್ದಾರೆ.

ಯಶ್ ಮುಂದಿನ ಚಿತ್ರದ ಹೆಸರು ‘ಟಾಕ್ಸಿಕ್’. 2025ರ ಏಪ್ರಿಲ್ 10ರಂದು ಚಿತ್ರ ತೆರೆಗೆ ಬರಲಿದೆ. ಮಲಯಾಳಂನ ಖ್ಯಾತ ನಟಿ, ನಿರ್ದೇಶಕಿ ಗೀತು ಮೋಹನ್ ದಾಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಕೆವಿಎನ್‌ ಪ್ರೊಡಕ್ಷನ್ಸ್‌ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ, ಹೊಸ ಪ್ರಾಜೆಕ್ಟ್‌ ಯಶ್ ಅವರ 19ನೇ ಸಿನಿಮಾವಾಗಿದೆ. ಒಂದು ಆಕರ್ಷಕ ವಿಡಿಯೊ ತುಣುಕಿನ ಮೂಲಕ ಚಿತ್ರದ ಟೈಟಲ್ ಅನ್ನು ಯಶ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ರಿವೀಲ್ ಮಾಡಿದ್ದಾರೆ.

‘What you seek is seeking you’ – Rumi. A Fairy Tale for Grown-ups. #TOXIC’ ಎಂದು ವಿಡಿಯೊ ಲಿಂಕ್‌ಗೆ ಯಶ್ ಶೀರ್ಷಿಕೆ ನೀಡಿದ್ದಾರೆ.