ಬೆಳಗಾವಿ: ಬಸವ ಜಯಂತಿ ೨೦೨೪ರ ನಿಮಿತ್ತ ಕೇಂದ್ರ ಬಸವ ಸಮಿತಿ ವತಿಯಿಂದರಾಜ್ಯಮಟ್ಟದ ಪ್ರಬಂಧ ಹಾಗೂ ಕವನ ಸ್ಪರ್ಧೆಯನ್ನು ಹಮ್ಮಿಕೊಳ್ಳಲು ನಿರ್ಣಯಿಸಲಾಗಿದೆ. ಈ ಪ್ರಬಂಧ ಹಾಗೂ ಕವನ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ಪರ್ಧೆಯನ್ನು ಯಶಸ್ವಿಗೊಳಿಸಬೇಕೆಂದು ಕೇಂದ್ರ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿಹಾಗೂ ಹಿರಿಯ ನಿರ್ದೇಶಕ ಮೋಹನ ಬಸವನಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರಿವು-ಆಚಾರ-ಅನುಭಾವ, ಭಾರತೀಯ ದಾರ್ಶನಿಕ ಪರಂಪರೆ ಮತ್ತು ಬಸವ ದರ್ಶನ, ವಚನ ಚಳುವಳಿ-ಸಾಂಸ್ಕೃತಿಕ ಮುಖಾಮುಖಿ, ರಾಜಪ್ರಭುತ್ವ, ಪ್ರಜಾಪ್ರಭುತ್ವ ಮತ್ತು ಶರಣರ ಪ್ರಜ್ಞಾಪ್ರಭುತ್ವ, ಭಾರತೀಯ ಭಕ್ತಿ ಪರಂಪರೆಯಲ್ಲಿ ಭಕ್ತಿಭಂಡಾರಿ ಬಸವಣ್ಣ ಇವುಗಳಲ್ಲಿ ಯಾವುದಾದರೂ ಒಂದು ವಿಷಯದ ಬಗ್ಗೆ ಪ್ರಬಂಧ ಬರೆಯಬಹುದು.ಕವನಗಳು ಬಸವಾದಿ ಶರಣರ ತತ್ವಗಳಿಗೆ ಸೀಮಿತವಾಗಿರತಕ್ಕದ್ದು (ಆಧುನಿಕ ವಚನಗಳಿಗೆ ಅವಕಾಶವಿಲ್ಲ).

ಆಯ್ಕೆಯಾದ ಪ್ರಬಂಧ ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತುತೃತೀಯ ಬಹುಮಾನವಾಗಿ ನಗದುರೂಪದಲ್ಲಿತಲಾ ರೂ.೨೫,೦೦೦/-, ರೂ.೧೦,೦೦೦/- ಮತ್ತು ರೂ.೫,೦೦೦/-ಗಳನ್ನು ಹಾಗೂ ಆಯ್ಕೆಯಾದ ಕವನಗಳ ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತುತೃತೀಯ ಬಹುಮಾನವಾಗಿ ನಗದುರೂಪದಲ್ಲಿತಲಾ ರೂ.೧೦,೦೦೦/-, ರೂ.೫,೦೦೦/- ಮತ್ತು ರೂ.೩,೦೦೦/-ಗಳನ್ನು ಹಾಗೂ ಸ್ಪರ್ಧೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಪ್ರಶಸ್ತಿ ಪತ್ರಗಳನ್ನು ಬಸವ ಜಯಂತಿಯ ವಿಶೇಷ ಸಮಾರಂಭದಂದು ನೀಡಿ ಗೌರವಿಸಲಾಗುವುದು.
ಪ್ರಬಂಧ ಮತ್ತು ಕವನ ಸ್ಪರ್ಧೆಯ ನಿಯಮಗಳು: ತಮ್ಮ ಪ್ರಬಂಧಗಳು ಮತ್ತು ಕವನಗಳು ಸ್ವ-ರಚಿತವಾಗಿರಬೇಕು,ತಮ್ಮಪ್ರಬಂಧಗಳು ಹಾಗೂ ಕವನಗಳು ಯಾವುದೇ ಪತ್ರಿಕೆಗಳಲ್ಲಿ ಮತ್ತು ಪುಸ್ತಕಗಳಲ್ಲಿ ಪ್ರಕಟಗೊಂಡಿರಬಾರದು, ಪ್ರಬಂಧಗಳು ೨೦೦೦ ಪದಗಳ ಮಿತಿಯಲ್ಲಿರಬೇಕು, ಪ್ರಬಂಧಗಳು ಮತ್ತು ಕವನಗಳು ನುಡಿತಂತ್ರಾಂಶದಲ್ಲಿ (ನುಡಿ ೦೧ ಇ, ಗಾತ್ರ ೧೩, ಸಾಲಿನ ಅಂತರ ೧.೫) ತಪ್ಪಿಲ್ಲದೆ ಟೈಪಿಸಿ, ತಿದ್ದುಪಡಿ ಮಾಡಿ ವರ್ಡ್ ಫೈಲ್ ಮತ್ತು ಪಿಡಿಎಫ್ ರೂಪದಲ್ಲಿ ತಮ್ಮ ಸಂಪೂರ್ಣ ವಿಳಾಸದೊಂದಿಗೆ ಕಳುಹಿಸುವುದು, ಪ್ರಬಂಧಗಳು ಮತ್ತು ಕವನಗಳನ್ನು competition@basavasamithi.
Org
-ಮೇಲ್‌ಗೆ ಕಳುಹಿಸುವುದು,ಆಯ್ಕೆಗೊಂಡ ಹಾಗೂ ಸೂಕ್ತ ಪ್ರಬಂಧಗಳನ್ನು ಹಾಗೂ ಕವನಗಳನ್ನು ಮುಂಬರುವ ಬಸವಪಥಗಳಲ್ಲಿ ಪ್ರಕಟಿಸಲಾಗುವುದು,ಕವನಗಳಿಗೆ ಯಾವುದೇ ಪದಗಳ ಮಿತಿಯಿರುವುದಿಲ್ಲ, ಕವನವು ಒಂದು ಪುಟಕ್ಕೆ ಮೀರದಂತಿರಬೇಕು, ಪ್ರಬಂಧ ಮತ್ತು ಕವನಗಳ ಮೌಲ್ಯಮಾಪನ ಬಸವ ಸಮಿತಿಯಿಂದ ರಚಿಸಿರುವ ಆಯ್ಕೆ ಸಮಿತಿಯದ್ದಾಗಿರುತ್ತದೆ, ಆಯ್ಕೆ ಸಮಿತಿಯ ನಿರ್ಧಾರವೇ ಅಂತಿಮವಾಗಿರುತ್ತದೆ, ತಮ್ಮಪ್ರಬಂಧಮತ್ತು ಕವನಗಳನ್ನು ದಿನಾಂಕ: ೩೧.೦೩.೨೦೨೪ರ ಒಳಗಾಗಿ ತಲುಪುವಂತೆ ಬಸವ ಸಮಿತಿ ತಿಳಿಸಿದೆ. ನಿಗದಿತ ದಿನಾಂಕದ ನಂತರ ಬಂದಪ್ರಬಂಧ ಮತ್ತು ಕವನಗಳನ್ನು ಯಾವುದೇ ಕಾರಣಕ್ಕೂ ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ಮೋಹನ ಬಸವನಗೌಡ ಪಾಟೀಲ (೯೪೪೮೯೨೦೮೮೮), ಶಂಕರ ಎಂ. ಜಾಲವಾದಿ(೯೪೮೧೪೨೨೭೩೪), ಯಶೋದಾ ಭಾಸ್ಕರ್ (೮೦೫೦೫೨೩೨೫೭) ಇವರನ್ನು ಸಂಪರ್ಕಿಸಬಹುದು.