ಸಂಕೇಶ್ವರ :
ಸರಕಾರಿ ಶಾಲೆಗೆ ಮಕ್ಕಳಿಗೆ ತರಲಾದ ಕ್ಷೀರಭಾಗ್ಯ ಯೋಜನೆಯ ಹಾಲಿನಲ್ಲಿ ಹಲ್ಲಿ ಬಿದ್ದ ಪರಿಣಾಮ ಶಾಲಾ ಬಾಲಕರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾದ ಘಟನೆ ಹುಕ್ಕೇರಿ ತಾಲೂಕಿನ ಉ. ಖಾನಾಪುರ ಗ್ರಾಮದಲ್ಲಿ ನಡೆದಿದೆ.

ಶಾಲಾ ಬಾಲಕರನ್ನು ಸಂಕೇಶ್ವರದ ಸರಕಾರಿ ಸೇರಿ ಕೆಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರದ ಸರಕಾರಿ ಶಾಲೆಯೊಂದರಲ್ಲಿ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯ ಹಾಲು ನೀಡಲಾಗಿತ್ತು. ಆದರೆ ಹಾಲಿನಲ್ಲಿ ಹಲ್ಲಿ ಬಿದ್ದಿರುವ ವಿಷಯ ಮಕ್ಕಳು ಹಾಲು ಕುಡಿದ ಬಳಿಕ ಬಹಿರಂಗವಾಗಿತ್ತು.

ಬಳಿಕ ಎರಡು ಅಂಬ್ಯುಲನ್ಸ್ ಹಾಗೂ ಕೆಲವು ಖಾಸಗಿ ವಾಹನಗಳ ಮೂಲಕ ಸಂಕೇಶ್ವರದ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆಯ ಸುದ್ದಿ ತಿಳಿದ ಬಳಿಕ ಮಕ್ಕಳ ಪಾಲಕರು ಗಾಬರಿಗೊಂಡು ಸಂಕೇಶ್ವರ ಸರಕಾರಿ ಆಸ್ಪತ್ರೆಗೆ ಧಾವಿಸಿ ಮಕ್ಕಳ ಮುಖ ನೋಡಲು ಪರದಾಡುತ್ತಿದ್ದಾರೆ. ಸುದ್ದಿ ತಿಳಿದ ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.