ಬೆಂಗಳೂರು : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಹಗಲು- ರಾತ್ರಿ ಶ್ರಮಿಸಿದ ವ್ಯಕ್ತಿಯೊಬ್ಬರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಬಹುದು ಎಂಬ ಚರ್ಚೆ ಜೋರಾಗಿದೆ. ಈಗಾಗಲೇ ಉತ್ತರ ಭಾರತದಲ್ಲಿ ರಾಮ ಮಂದಿರ ಜವಾಬ್ದಾರಿ ವಹಿಸಿಕೊಂಡ ಹಲವು ನಾಯಕರಿಗೆ ಬಿಜೆಪಿ ಟಿಕೆಟ್ ಘೋಷಣೆಯಾಗಿದೆ. ಇದೀಗ ದಕ್ಷಿಣ ಭಾರತದಲ್ಲೂ ಇಂಥ ಬೆಳವಣಿಗೆ ನಡೆದರೆ ಅಚ್ಚರಿಪಡಬೇಕಾಗಿಲ್ಲ.

ಈ ನಡುವೆ ಇದೀಗ
ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರಾಗಬಹುದು ? ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಅಭ್ಯರ್ಥಿಯ ಆಯ್ಕೆ ವರಿಷ್ಠರಿಗೆ ತಲೆನೋವಾಗಿ ಸಂಭವಿಸಿರುವ ಸಂದರ್ಭದಲ್ಲಿ ಈ ಪ್ರತಿಷ್ಠಿತ ಕ್ಷೇತ್ರವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಈ ಸಲ ಸೃಷ್ಟಿಯಾಗಿದೆ.

ಅತ್ಯಂತ ಶ್ರೇಷ್ಠ ಸಂಘಟಕರಾಗಿ ಹೆಸರು ಮಾಡಿರುವ ವ್ಯಕ್ತಿಗೆ ಬಿಜೆಪಿ ಇದೀಗ ಟಿಕೆಟ್ ನೀಡಬಹುದು ಎಂಬ ಚರ್ಚೆ ಎಲ್ಲೆಡೆ ಜೋರಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ನಾಗರಕಟ್ಟೆಯವರಾದ ಸಂಘದ ಪೂರ್ಣಪ್ರಮಾಣದ ಪ್ರಚಾರಕರಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಗೋಪಾಲ ಹೆಗಡೆ ಅವರನ್ನು ಅಭ್ಯರ್ಥಿಯಾಗಿಸಿದರೆ ಗೆಲುವು ಸುಲಭ ಆಗಬಹುದು ಎಂಬ ಲೆಕ್ಕಾಚಾರ ಈಗ ರಾಜಕೀಯ ವಲಯದಲ್ಲಿ ಪ್ರಮುಖವಾಗಿ ಕೇಳಿ ಬಂದಿದೆ.

ಗೋಪಾಲಜೀ ಸಂಘಟನೆಯ ಕೆಲಸದಲ್ಲಿ ಅತ್ಯಂತ ಸಮರ್ಥರು. ಇದರಿಂದ ಅವರು ಸಂಸದರಾದರೆ ರಾಜ್ಯದಲ್ಲಿ ಪಕ್ಷದ ಬಲವೃದ್ಧಿಗೆ ಅವಕಾಶ ದೊರೆತ ಹಾಗಾಗುತ್ತದೆ ಎಂಬುದು ಸ್ವಯಂ ಸೇವಕರ ಅಭಿಪ್ರಾಯ. ಆದರೆ ಅವರು ರಾಜಕೀಯಕ್ಕೆ ಬರಲು ಉತ್ಸುಕರಾಗಿದ್ದಾರೆಯೇ ಉತ್ತರ ಕನ್ನಡ ಅಥವಾ ರಾಜ್ಯದಲ್ಲಿ ಬೇರೆ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಸಮ್ಮತಿಸಿದ್ದಾರೆಯೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

 

ಶ್ರೇಷ್ಠ ಸಂಘಟಕನಿಗೆ ಟಿಕೆಟ್ ನೀಡಲು ಕಮಲ ಪಕ್ಷ ಚಿಂತನೆ : ಲೋಕಸಭೆಗೆ ಗೋಪಾಲಜೀ ?

ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರದಲ್ಲಿ ಈ ಸಲ ಬಿಜೆಪಿ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಬಹುತೇಕ ಖಚಿತ ಎಂಬ ವಾತಾವರಣ ಕಂಡು ಬಂದಿದೆ. ಅದರಲ್ಲೂ ರಾಮಮಂದಿರ ನಿರ್ಮಾಣಕ್ಕೆ ಆಹರ್ನಿಶಿ ಶ್ರಮಿಸಿದ ವ್ಯಕ್ತಿಗೆ ಬಿಜೆಪಿ ಮನ್ನಣೆ ನೀಡಲಿದೆ ಎಂಬ ಮಾತು ಪ್ರಮುಖವಾಗಿ ಕೇಳಿ ಬರುತ್ತಿದೆ.
ಸಂಘಟನಾ ಚತುರ ತೆರೆಮರೆಯ ಸೇವಾ ಮನೋಭಾವದ ಹಿನ್ನೆಲೆಯ ವ್ಯಕ್ತಿಗೆ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗಿದೆ.
ಸಿದ್ದಾಪುರ ತಾಲೂಕಿನ ಹೆಗ್ಗರಣಿ ಸಮೀಪದ ಹೊಸ್ತೋಟದ ನಾಗರ ಕಟ್ಟೆ ಗೋಪಾಲ ಎಂ. ಭಟ್ (ಗೋಪಾಲ ಜೀ ಎಂದೇ ಖ್ಯಾತರಾದವರು) ಅವರನ್ನು ಲೋಕಸಭಾ ಚುನಾವಣೆಯ ಕಣಕ್ಕೆ ಇಳಿಸಲು ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂಬ ಚರ್ಚೆ ಇದೀಗ ತುಸು ಜೋರಾಗಿದೆ.

ಗೋಪಾಲಜೀ ಸಂಘ ಪರಿವಾರದ ವರಿಷ್ಠರಿಗೆ ಅತ್ಯಂತ ಆಪ್ತರಾದವರು. ವಿಶ್ವ ಹಿಂದೂ ಪರಿಷತ್ ಪ್ರಮುಖರು ಹೌದು. ಗೋಪಾಲಜೀ ಅವರನ್ನು ಆಯೋಧ್ಯೆಯ ರಾಮ ಮಂದಿರದ ಉಸ್ತುವಾರಿಯಾಗಿ ನೇಮಿಸಲಾಗಿತ್ತು. ನಿಗದಿತ ಸಮಯದೊಳಗೆ ತಮಗೆ ನೀಡಿದ ಜವಾಬ್ದಾರಿ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದಲ್ಲದೇ ಹಲವಾರು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಹಲವಾರು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ, ಸಂಘಟನೆಯಲ್ಲೂ ಚತುರ ಎನಿಸಿಕೊಂಡವರು. ಗೋಪಾಲಜೀ ನಾಗರಕಟ್ಟೆ ಹವ್ಯಕ ಸಮುದಾಯಕ್ಕೆ ಸೇರಿದವರು. ಹಿಂದೆ ಇಲ್ಲಿ ಹವ್ಯಕರ ಬಾಹುಳ್ಯದ ಹವ್ಯಕ ಸಮುದಾಯದ ಅನಂತಕುಮಾರ ಹೆಗಡೆ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡುತ್ತ ಬರಲಾಗಿದೆ.

ಗೋಪಾಲಜೀ ಅವರನ್ನು ಉತ್ತರ ಕನ್ನಡದಿಂದಲೇ ಸ್ಪರ್ಧೆಗೆ ಅಣಿಗೊಳಿಸಲಾಗುತ್ತದೆಯೇ, ಅಥವಾ ರಾಜ್ಯದ ಬೇರೆ ಕ್ಷೇತ್ರಗಳಲ್ಲಿ ಟಿಕೆಟ್ ನೀಡಲಾಗುತ್ತದೆಯೇ ಎಂಬುದು ಸಹಾ ಸ್ಪಷ್ಟವಾಗಿಲ್ಲ.

ಹವ್ಯಕ ಸಮುದಾಯವರಿಗೆ ಈ ಕ್ಷೇತ್ರದಲ್ಲಿ ಟಿಕೆಟ್ ನೀಡುವುದಾದರೆ ಹಾಲಿ ಸಂಸದ ಅನಂತ ಕುಮಾರ ಹೆಗಡೆ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಈ ಮೂರು ಹೆಸರು ಪ್ರಸ್ತಾಪವಾಗಿದೆ. ಹಾಲಿ ಸಂಸದರಿಗೆ ಟಿಕೆಟ್ ವಂಚಿಸಿ ಕ್ಷೇತ್ರವನ್ನು ದಕ್ಷಿಸಿಕೊಳ್ಳುವುದು ಸುಲಭ ಸಾಧ್ಯ ಅಲ್ಲ. ಯಾರೇ ಅಭ್ಯರ್ಥಿ ಆದರೂ ಪರಸ್ಪರರಲ್ಲಿ ಮತ್ತು ಕಾರ್ಯಕರ್ತರಲ್ಲಿ ಮೇಲಾಟಗಳು ನಡೆಯುವ ಸಾಧ್ಯತೆ ಇದೆ.

ಆದರೆ, ಗೋಪಾಲಜೀ ಅಭ್ಯರ್ಥಿ ಆದರೆ ಯಾವ ಕಡೆಯಿಂದಲೂ ಅಪಸ್ವರ ಬಾರದೇ ಸುಲಭವಾಗಿ ಕ್ಷೇತ್ರವನ್ನು ಬಿಜೆಪಿ ಪಡೆಯಬಹುದು ಎಂದು ವಿಶ್ಲೇಷಿಸಲಾಗಿದೆ.

ಗೋಪಾಲಜೀ ಅವರು ಎಂಎಸ್ಸಿ ಪದವೀಧರರಾಗಿದ್ದು ಬಂಗಾರದ ಪದಕ ಪಡೆದವರು. ನಂತರ ಸಾರ್ವಜನಿಕ ಜೀವನಕ್ಕೆ ಇಳಿದು ಸಂಘದ ಪ್ರಚಾರಕರಾಗಿ ದೇಶದಾದ್ಯಂತ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಸ್ವಯಂ ಜವಾಬ್ದಾರಿಗಳನ್ನು ಸಮರ್ಥವಾಗಿ ವರಿಷ್ಠರಿಗೆ ಅತ್ಯಂತ ಆಪ್ತರಾದ ಇವರನ್ನು ಆಯೋಧ್ಯೆಯ ರಾಮ ಮಂದಿರದ ಉಸ್ತುವಾರಿಯಾಗಿ ಅವಧಿಯೊಳಗೆ ಯಶಸ್ವಿಯಾಗಿ ತಮಗೆ ನೀಡಿದ ಜವಾಬ್ದಾರಿಯನ್ನು ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಒಂದು ವೇಳೆ ಇವರೇ ಸಂಸದರಾದರೆ ಸೇವಾ ಸಂಘದ ಹಲವಾರ ಪರಿವಾರದ
ಜಿಲ್ಲೆ ಮತ್ತೊಬ್ಬ ಮೋದಿ ದೊರೆತ ಹಾಗೆಯೇ ಎಂಬುದು ಸ್ವಯಂ ಸೇವಕರ ಅಭಿಪ್ರಾಯ ಆಗಿದೆ.

ರಾಮ ಮಂದಿರ ಇನ್ನೂ ಪೂರ್ಣ ಆಗದಿರುವ ಹಿನ್ನೆಲೆಯಲ್ಲಿ ಈ ಊಹಾಪೋಹಗಳು ನಿಜವಾಗಲಿದೆಯೇ ಕಾದು ನೋಡಬೇಕಿದೆ. ಯಾಕೆಂದರೆ ರಾಮ ಮಂದಿರದ ನಿರ್ಮಾಣದ ಪ್ರಮುಖ ಜವಾಬ್ದಾರಿಯನ್ನು ಗೋಪಾಲ್ ಜೀ ಅವರು ನಿರ್ವಹಿಸುತ್ತಿರುವುದರಿಂದ ಲೋಕಸಭೆ ಚುನಾವಣೆಗೆ ಹೇಗೆ ಬರುವರೋ ನೋಡಬೇಕು. ಸಕ್ರಿಯ ಹಾಗೂ ಅತ್ಯಂತ ಕ್ರಿಯಾಶೀಲ ಸಂಘಟಕರಾದ
ಗೋಪಾಲ್ ಜೀ ಉನ್ನತ ವಿದ್ಯೆ ಪಡೆದು ಉತ್ತೀರ್ಣರಾದವರು. ಎಂಎಸ್ಸಿಯಲ್ಲಿ ಬಂಗಾರದ ಪದಕ ಪಡೆದ ಅವರಿಗೆ ಅಮೇರಿಕಾದ ಕಂಪನಿಯೊಂದರಲ್ಲಿ ಉದ್ಯೋಗಕ್ಕೆ ಕರೆ ಬಂದಿತ್ತು. ಆದರೆ ಅಲ್ಲಿಗೆ ತೆರಳದೆ ಸಂಘದ ವಿವಿಧ ಸ್ತರದ ಜವಾಬ್ದಾರಿಯನ್ನು ನಿಭಾಯಿಸಿ, ಈಗ ವಿಶ್ವಹಿಂದೂ ಪರಿಷತ್ ಪೂರ್ಣಾವಧಿ ಪ್ರಚಾರಕರಾಗಿ ಸೇವೆ ಆರಂಭಿಸಿದ್ದಾರೆ. ಕಳೆದ 37 ವರ್ಷದಿಂದಲೂ ಸಂಘ ಮತ್ತು ವಿಶ್ವಹಿಂದೂ ಪರಿಷದ್‌ನಲ್ಲಿ ಪೂರ್ಣಾವಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

1984 ರಲ್ಲಿ ಮೈಸೂರು ತಾಲೂಕು ಪ್ರಚಾರಕರಾಗಿ ಸೇವೆ ಆರಂಭಿಸಿ ನಂತರ ಬೆಳಗಾವಿ ಜಿಲ್ಲೆಯ ಪ್ರಚಾರಕರಾಗಿಯೂ ಸೇವೆ ಮಾಡಿದವರು. ಗುಲಬರ್ಗಾ ವಿಭಾಗ ಪ್ರಚಾರಕರಾಗಿ, ಉತ್ತರ ಕರ್ನಾಟಕ ಪ್ರಾಂತ (17 ಜಿಲ್ಲೆ ) 2012ರಲ್ಲಿ ಹುಬ್ಬಳ್ಳಿಯಲ್ಲಿ 20 ಸಾವಿರ ಸ್ವಯಂ ಸೇವಕರನ್ನು ಸೇರಿಸಿ ಹಿಂದೂ ಶಕ್ತಿ ಸಂಗಮ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ ಹಿಂದಿನ ಶಕ್ತಿ ಇವರೇ. ಬೆಳಗಾವಿ ಜಿಲ್ಲಾ ಪ್ರಚಾರಕರಾಗಿ ಕೆಲಸ ಮಾಡಿ ಉತ್ತಮ ಹೆಸರು ಪಡೆದಿದ್ದರು.

2017 ರಲ್ಲಿ ಉಡುಪಿಯಲ್ಲಿ 2500 ಸಂತರ ಸಮಾವೇಶ, ತುಮಕೂರಿನ ಸಿದ್ಧಗಂಗಾ ಮಠದಲ್ಲಿ 500 ಮಠಾಧೀಶರ ಚಿಂತನ ಸಭೆಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದರು.

5 ವರ್ಷದಿಂದ ವಿಶ್ವಹಿಂದೂ ಪರಿಷತ್ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ಕಾರ್ಯನಿರ್ವಹಿಸುತ್ತಿದ್ದರು. ಈಚೆಗೆ ಅವರನ್ನು ಗುಜರಾತ್, ರಾಜಸ್ಥಾನ ರಾಜ್ಯಗಳ ಒಟ್ಟು ಆರು ಪ್ರಾಂತಗಳ ಸಂಘಟನೆ ಜವಾಬ್ದಾರಿಗೆ ನೇಮಕ ಮಾಡಲಾಗಿತ್ತು. ಗುಜರಾತ್ ಒಂದೇ ರಾಜ್ಯದಲ್ಲಿ ರಾಮಮಂದಿರ ನಿರ್ಮಾಣಕ್ಕೆ 394 ಕೋಟಿ ರೂ. ನಿಧಿ ಸಂಗ್ರಹಿಸುವ ಮೂಲಕ ಗಮನ ಸೆಳೆದಿದ್ದಾರೆ.

ಇದೀಗ ಗೋಪಾಲ ಜೀ ಅವರಿಗೆ
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪೂರ್ಣಗೊಳ್ಳುವವರೆಗೂ ಉಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿಯನ್ನು ನೀಡಲಾಗಿದೆ. ಆ ಜವಾಬ್ದಾರಿ ಇರುವ ನಡುವೆ ಲೋಕಸಭಾ ಚುನಾವಣೆಗೆ ಒಪ್ಪುತ್ತಾರೆಯೇ ಕಾದು ನೋಡಬೇಕು.

ಗೋಪಾಲಜೀ ಅವರು ಬೆಳಗಾವಿಯ ಟೇಲರ್ ಮತ್ತು ರೆಡಿಮೇಡ್ ಅಂಗಡಿಯ ಮಾಲಿಕ, ವಿಶ್ವಹಿಂದೂ ಪರಿಷತ್ ಉತ್ತರ ಕರ್ನಾಟಕ ಪ್ರಾಂತ ಸಹಕೋಶಾಧ್ಯಕ್ಷ ಕೃಷ್ಣ ಭಟ್ ಗೋಪಾಲ ಜೀ ಅವರ ಸಹೋದರರಲ್ಲಿ ಒಬ್ಬರೂ ಸಹಾ ಎನ್ನುವುದು ಗಮನಾರ್ಹ.