ಶ್ರೀರಂಗಪಟ್ಟಣ :
ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಶ್ರೀ ಚಂದ್ರಮೌಳೇಶ್ವರ ದೇಗುಲದಲ್ಲಿ ಸೂರ್ಯರಶ್ಮಿ ಶಿವಲಿಂಗವನ್ನು ಸ್ಪರ್ಶಿಸಿದೆ. ಈ ಘಟನೆಯನ್ನು ಸಾವಿರಾರು ಭಕ್ತರು ಕಣ್ಣಾರೆ ಕಂಡರು.
ಬೆಳಗ್ಗೆ 7.50ಕ್ಕೆ ಸರಿಯಾಗಿ ಸೂರ್ಯರಶ್ಮಿ ಶಿವಲಿಂಗವನ್ನು ಸ್ಪರ್ಶಿಸಿದೆ. ಈ ಅದ್ಭುತ ನೋಡಲು ಭಕ್ತರು ಆಗಮಿಸಿದ್ದರು.
ಈ ಸಲ ಅರ್ಧಗಂಟೆ ತಡವಾಗಿ ಸೂರ್ಯರಶ್ಮಿ ಶಿವಲಿಂಗವನ್ನು ಸ್ಪರ್ಶಿಸಿದೆ. ಪ್ರತಿ ವರ್ಷ ಮಕರ ಸಂಕ್ರಮಣದ ದಿನದಂದು ಈ ದೇಗುಲದಲ್ಲಿ ವಿಸ್ಮಯವುಂಟಾಗುತ್ತದೆ. ಆಗ ದೇಗುಲದಲ್ಲಿ ವಿಶೇಷ ಪೂಜೆಯನ್ನು ಆಚರಿಸಲಾಗುತ್ತದೆ.
ದೇಗುಲದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ತಂದೆ ಖಾಸಾ ಚಾಮರಾಜ ಒಡೆಯರ್ ಅವರ ಸ್ಮರಣೆಗಾಗಿ 18ನೇ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಿದ್ದರು. ಈ ದೇವಾಲಯದಲ್ಲಿ ಕಾಶಿಯಿಂದ ತರಿಸಿದ ಶಿವಲಿಂಗವನ್ನು ಕಾವೇರಿ ನದಿಯ ದಂಡೆಯಲ್ಲಿ ಪ್ರತಿಷ್ಠಾಪಿಸಲಾಗಿದೆ.